ಸರ್ಕಾರಿ ಪ್ರೌಢಶಾಲೆ ನಿಧಿಗೆಯಲ್ಲಿ ಸಂಚಾರಿ ವಿಜ್ಞಾನ ಪ್ರದರ್ಶನ: ವಿದ್ಯಾರ್ಥಿಗಳಲ್ಲಿ ವಿಜ್ಞಾನಾಸಕ್ತಿ ಹೆಚ್ಚಿಸಿದ ಪ್ರಾಯೋಗಿಕ ಪ್ರದರ್ಶನ

 

ಶಿವಮೊಗ್ಗ, ಜೂನ್ 17: ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ (ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯಗಳ ಪರಿಷತ್), ಸಂಸ್ಕೃತಿ ಸಚಿವಾಲಯ, ಭಾರತ ಸರ್ಕಾರದ ವತಿಯಿಂದ ನಗರದ ಸರ್ಕಾರಿ ಪ್ರೌಢಶಾಲೆ ನಿಧಿಗೆಯಲ್ಲಿ ವಿದ್ಯಾರ್ಥಿಗಳಿಗಾಗಿ ವಿಶೇಷ ಸಂಚಾರಿ ವಿಜ್ಞಾನ ಪ್ರದರ್ಶನ ಆಯೋಜಿಸಲಾಯಿತು.

ಪ್ರದರ್ಶನದಲ್ಲಿ ನೇರ ವಿದ್ಯುತ್ ಮತ್ತು ಪರ್ಯಾಯ ವಿದ್ಯುತ್, ಆಯಸ್ಕಾಂತ ಗುರುತಿಸುವಿಕೆ, ಸೇತುವೆ ಸಮತೋಲನ, ಆಸ್ಟೆರ್ಡ್ ಪ್ರಯೋಗ, ಆಯಸ್ಕಾಂತದ ಗುಣಗಳು, ಧಾರಕಗಳ ಸರಣಿ ಹಾಗೂ ಸಮಾನಾಂತರ ಜೋಡಣೆ, ಫ್ಲೆಮಿಂಗ್ ಎಡಗೈ ನಿಯಮ, ನೇರ ವಿದ್ಯುತ್ ಮೋಟಾರ್, ಓಮ್ ನಿಯಮ, ವಾಹಕಗಳು ಮತ್ತು ಅವಾಹಕಗಳು, ಫ್ಯಾರಡೆ ಪ್ರಯೋಗ, ಕಾಂತಿಯ ವಿದ್ಯುತ್ ಪ್ರೇರಣೆ, ವಿದ್ಯುತ್ ಜನಕ, ಬಲ್ಪಿನ ವಿಧಗಳು ಸೇರಿದಂತೆ ಭೌತಶಾಸ್ತ್ರ ಹಾಗೂ ಎಲೆಕ್ಟ್ರಾನಿಕ್ಸ್‌ಗೆ ಸಂಬಂಧಿಸಿದ ಹಲವು ವಿಷಯಗಳನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಯಿತು.

ಹಿರಿಯ ಶಿಕ್ಷಣ ಅಧಿಕಾರಿಯಾದ ಎಂ.ಎಸ್. ಮುತ್ತುರಾಜ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ವಿವಿಧ ವಿಜ್ಞಾನ ಪ್ರಯೋಗಗಳ ನೇರ ಪ್ರದರ್ಶನ ನೀಡಿ, ಅವುಗಳ ಕಾರ್ಯವಿಧಾನ ಮತ್ತು ವೈಜ್ಞಾನಿಕ ತತ್ವಗಳನ್ನು ಸರಳವಾಗಿ ವಿವರಿಸಿದರು. ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿ ವಿಜ್ಞಾನದ ವಿವಿಧ ಅಂಶಗಳ ಬಗ್ಗೆ ತಿಳಿದುಕೊಂಡರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಬಿ. ಲಕ್ಷ್ಮಣಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಕೆ. ಮಂಜುನಾಥ್, ಸದಸ್ಯ ಆನಂದ್, ಶಿಕ್ಷಕ-ಶಿಕ್ಷಕಿಯರು, ಸಿಬ್ಬಂದಿ ಹಾಗೂ ಎಲ್ಲಾ ತರಗತಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜ್ಞಾನವನ್ನು ಪುಸ್ತಕಗಳಲ್ಲಷ್ಟೇ ಅಲ್ಲದೆ ಪ್ರಾಯೋಗಿಕ ಅನುಭವದ ಮೂಲಕ ಕಲಿಯುವ ಅವಕಾಶವನ್ನು ಈ ಸಂಚಾರಿ ವಿಜ್ಞಾನ ಪ್ರದರ್ಶನ ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಟ್ಟಿದ್ದು, ವಿಜ್ಞಾನ ಶಿಕ್ಷಣದತ್ತ ಹೆಚ್ಚಿನ ಆಸಕ್ತಿ ಮೂಡಿಸಿತು.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ