ಸಿಗಂದುಾರು ಪಾರಂಪರಿಕ ಹಾಗುಾ ಐತಿಹಾಸಿಕ ಕ್ಷೇತ್ರಗಳ ಪ್ರವಾಸ


ಶಿವಮೊಗ್ಗ : ಐತಿಹಾಸಿಕ ಹಿನ್ನೆಲೆ ಹೊಂದಿರುವ ಪಾರಂಪರಿಕ ಸ್ಥಳಗಳಿಗೆ ಭೇಟಿ ನೀಡುವುದರಿಂದ, ಅಲ್ಲಿನ ಅನೇಕ ವಿಷಯಗಳ ಪರಿಚಯವಾಗಿ ಜ್ಞಾನ ವೃದ್ಧಿಗೆ ಸಹಕಾರಿ ಆಗುತ್ತದೆ ಎಂದು ಫ್ರೆಂಡ್ಸ್ ಸೆಂಟರ್ ನ ಅಧ್ಯಕ್ಷರಾದ ಬಿ.ಜಿ.ಧನರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.

ಫ್ರೆಂಡ್ಸ್ ಸೆಂಟರ್ ವತಿಯಿಂದ ಮಂಗಳವಾರ ಸದಸ್ಯರು ಮಹಿಳೆಯರು ಸೇರಿದಂತೆ ಪ್ರವಾಸವನ್ನು ಆಯೋಜಿಸಲಾಗಿತ್ತು. ಅಂದು ಬೆಳಿಗ್ಗೆ 6.00 ಗಂಟೆಗೆ ಪ್ರವಾಸ ಆರಂಭಿಸಲಾಯಿತು.

ಆನಂದಪುರದ ಸಮೀಪವಿರುವ ಮಲಂದುಾರು ಎಂಬಲ್ಲಿ 435 ವರ್ಷ ಇತಿಹಾಸವುಳ್ಳ ಅತೀ ಸುಂದರ ಪುಷ್ಕರಣಿ ಇರುವ "ಚಂಪಕ ಸರಸು" ಎಂಬ ಸ್ಥಳ ವೀಕ್ಷಿಸಿ ನಂತರ

ಸಾಗರ ಮಾರ್ಗದ ಎಡಭಾಗದಲ್ಲಿರುವ ಸುಮಾರು 800 ವರ್ಷಗಳ ಹಿಂದಿನ ಕಲ್ಲಿನ ವಾಸ್ತುಶಿಲ್ಪದ "ಉಮಾಶಂಕರ" ದೇವರ ದರ್ಶನ ಪಡೆದು, ಇಲ್ಲಿಂದ ಅರ್ಧ ಕಿಲೆುಾೕಮೀಟರ್ ದುಾರದ ಕಾಡಿನ ನಡುವೆ ಇರುವ 1300 ವರ್ಷದ ಹಿಂದೆ ನಿರ್ಮಾಣಗುಾಂಡ ಕೇರಳ ಶೈಲಿಯ ದೇಗುಲದಲ್ಲಿ ಕುಳಿತಿರುವ "ಕಂಚಿ ಕಾಳಮ್ಮ" ದೇವಿಯ ದರ್ಶನ ಪಡೆದು ಹಾಗೆಯೇ ಮಾರ್ಗ ಮದ್ಯದಲ್ಲಿ ಐದು ಜನ ಸೇರಿ ಬಾಚಿ ಹಿಡಿದರುಾ ಸಿಗದಂತ 800 ವರ್ಷದ "ಹಳೆಯ ವೃಕ್ಷ" ವೀಕ್ಷಿಸಿ, ನಂತರ ದಾರಿಯಲ್ಲಿ ಬಯಲಲ್ಲಿ ಕುಳಿತಿರುವ "ಅನಂತನಾಗ" ದೇವರ ದರ್ಶನ ಪಡೆದು, ಇಕ್ಕೇರಿಯ ಪುರಾತನ ಕಾಲದ ಸುಪ್ರಸಿದ್ದ ವಾಸ್ತುಶಿಲ್ಪದ ಶಿಲಾಮಂದಿರವಾದ "ಶ್ರೀ ಅಘೆುಾರೇಶ್ವರ" (ಎಡಭಾಗದಲ್ಲಿ ಸೆುಾೕಮಸುಾತ್ರ ಇರುವ ಅಪರುಾಪದ ಶಿವ) ದೇವರ ಹಾಗುಾ "ಅಖಿಲಾಂಡೇಶ್ವರಿ" ದೇವಿಯ ದರ್ಶನ ಪಡೆದು ಅಲ್ಲಿಂದ ಸಿಗಂದುಾರಿಗೆ ತೆರಳಿದೆವು.


ಮಾರ್ಗ ಮದ್ಯದಲ್ಲಿ ಚಂದ್ರಚಕೆುಾೕರಿ ಚಿತ್ರದ ಶುಾಟಿಂಗ್ ಸ್ಪಾಟ್ ಆದ "ಮಡೆನುಾರು" ಮರಳಿನ ಸೇತುವೆಯನ್ನು ವೀಕ್ಷಿಸಿ ಕಣ್ಮನ ತುಂಬಿಕೆುಾಂಡರು. ಹಾಗೆಯೇ "ಸಿಗಂದುಾರು ಚೌಡೇಶ್ವರಿ ದೇವಿ"ಯ ದರ್ಶನ ಪಡೆದು ಕಣ್ತುಂಬಿಕೆುಾಂಡು, ನಂತರ  ಬರುವಾಗ ಸುಪ್ರಸಿದ್ದ ಸಿಗಂದುಾರು ನುಾತನವಾಗಿ ನಿರ್ಮಿಸಿರುವ ಸೇತುವೆ ಹಾಗುಾ ಪ್ರಕೃತಿ ಸೌಂದರ್ಯ ಸವಿದೆವು ಎಂದು ಅತ್ಯಂತ ಉತ್ಸುಕದಿಂದ ಪ್ರವಾಸದ ಪರಿಯನ್ನು ವಿವರಿಸಿದರು. 

ಅಲ್ಲಿಂದ ಕಡೆಯದಾಗಿ ಶಕ್ತಿಕೇಂದ್ರವಾದ ವರದಳ್ಳಿಯ ಶ್ರೀಧರ ಆಶ್ರಮಕ್ಕೆ ಬಂದು, ಅಲ್ಲಿನ ಬೆಟ್ಟದ ತಪ್ಪಲಲ್ಲಿರುವ 280 ಮೆಟ್ಟಿಲೇರಿ ಬಸವಣ್ಣನ ಬಾಯಿಂದ ಬರುವ ಶ್ರೀಧರ ತೀರ್ಥ ಸ್ನಾನ ಮಾಡಿ ನಂತರ ಶ್ರೀಧರ ಗುರುಗಳಿದ್ದ ಮಂದಿರದಲ್ಲಿ ದರ್ಶನ ಶಿವಮೆಾಗ್ಗದ ಕಡೆಗೆ ಮುಖ ಮಾಡಿದರು.

ಈ ವೇಳೆ ಫ್ರೆಂಡ್ಸ್ ಸೆಂಟರ್ ನ ಸದಸ್ಯರು ಪ್ರವಾಸದಲ್ಲಿ ಅತ್ಯಂತ ಉತ್ಸುಕದಿಂದ ಪಾಲ್ಗೊಂಡಿದ್ದರು.

ಫ್ರೆಂಡ್ಸ್ ಸೆಂಟರ್ ವತಿಯಿಂದ ಆಯೋಜಿಸಿದ್ದ ಪಾರಂಪರಿಕ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸದಲ್ಲಿ ಅನೇಕ ವಿಷಯಗಳ ಬಗ್ಗೆ ತಿಳಿದುಕೊಳ್ಳಲಾಯಿತು. ಪ್ರತಿನಿತ್ಯದ ಕೆಲಸದ ಒತ್ತಡದಲ್ಲಿ ಒಂದು ದಿನದ ಪ್ರವಾಸ ನಮಗೆ ಆರಾಮದಾಯಕ ಮತ್ತು ಸಂತೋಷದ ಭಾವವನ್ನು ಉಂಟು ಮಾಡುತ್ತದೆ. ಇಂತಹ ಐತಿಹಾಸಿಕ ಸ್ಥಳಗಳಿಗೆ ಪ್ರವಾಸ ಹೋಗುವುದರಿಂದ ಜ್ಞಾನ ವೃದ್ಧಿಯಾಗುತ್ತದೆ.

- ಬಿ.ಜಿ.ಧನರಾಜ್, ಫ್ರೆಂಡ್ಸ್ ಸೆಂಟರ್ ಅಧ್ಯಕ್ಷರು

ಕಾಮೆಂಟ್‌ಗಳು