ಜೆಸಿಐಯಿಂದ ಆಟೋ ಚಾಲಕರಿಗೆ ಉಚಿತ ಸಮವಸ್ತ್ರ ವಿತರಣೆ ಹಾಗೂ ಅಗತ್ಯ ವಸ್ತುಗಳ ಹಂಚಿಕೆ ಮಾಡುವ ಮೂಲಕ ಕಾರ್ಮಿಕರ ದಿನಾಚರಣೆ
ಬಳ್ಳಾರಿ, ಮೇ 1: ಕಾರ್ಮಿಕರ ದಿನಾಚರಣೆಯ ಅಂಗವಾಗಿ ಜೆಸಿಐ ಭಾರತ ಅಂಗಸಂಸ್ಥೆಯಾದ ಜೆಸಿಐ ಬಳ್ಳಾರಿ ರಾಕ್ ಸಿಟಿ ವತಿಯಿಂದ ಆಟೋ ಚಾಲಕರಿಗೆ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮವನ್ನು ಟಿ.ಬಿ. ಸಾನಿಟೋರಿಯಮ್ ಆಟೋ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಯಿತು. ಆಟೋ ಚಾಲಕರಲ್ಲಿ ಶಿಸ್ತುಬದ್ಧ ಸೇವೆ, ಏಕತೆ ಮತ್ತು ವೃತ್ತಿಯ ಘನತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಹಲವಾರು ಆಟೋ ಚಾಲಕರಿಗೆ ಉಚಿತ ಸಮವಸ್ತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕ್ರಿಯಾಶೀಲ ಸದಸ್ಯೆ ಪುಷ್ಪಲತಾ ಮೇಡಂ ಅವರ ವತಿಯಿಂದ ಚಾಲಕರ ದಿನನಿತ್ಯ ಬಳಕೆಗೆ ಅಗತ್ಯವಾದ ಪೇಸ್ಟ್, ಬ್ರಷ್, ಗ್ಲುಕೋಸ್ ಪೌಡರ್ ಹಾಗೂ ಹ್ಯಾಂಡ್ ವಾಶ್ ಲಿಕ್ವಿಡ್‌ಗಳನ್ನು ವಿತರಿಸಿ ಮಾನವೀಯತೆ ಮೆರೆದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಧ್ಯಕ್ಷೆ ಜೆಸಿ ರಾಧಾ, “ಚಾಲಕರ ಸುರಕ್ಷತೆ – ಸಮಾಜದ ಪ್ರಗತಿ” ಎಂಬ ಸಂದೇಶದೊಂದಿಗೆ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೆಸಿಐ ಬಳ್ಳಾರಿ ರಾಕ್ ಸಿಟಿ, ಜೆಸಿಐ ಬಳ್ಳಾರಿ ಸ್ಟೀಲ್ ಸಿಟಿ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಇದೇ ಸಂದರ್ಭದಲ್ಲಿ ಸಂಘಟನೆಯ ಪೂರ್ವಾಧ್ಯಕ್ಷರು ಹಾಗೂ ಸಾವಯವ ಕೃಷಿಕರಾದ ಜೆಸಿ ದೇವೇಂದ್ರಪ್ಪ ಅವರ ಹುಟ್ಟುಹಬ್ಬವನ್ನು ಸಹ ಆಚರಿಸಲಾಯಿತು.
ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದ ಎಲ್ಲಾ ಸದಸ್ಯರು, ಸಾರ್ವಜನಿಕರು ಹಾಗೂ ಸಹಕರಿಸಿದವರನ್ನು ಅಧ್ಯಕ್ಷೆ ಜೆಸಿ ರಾಧಾ ಹೃತ್ಪೂರ್ವಕವಾಗಿ ಅಭಿನಂದಿಸಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ