ತಾಯಿ ಎಂಬುದು ಅಮೃತಕ್ಕಿಂತ ಶ್ರೇಷ್ಠ ತಾಯಿಯ ಪ್ರೀತಿ ಎಲ್ಲರಿಗೂ ಸಿಗಲಿ

 


ತಾಯಿ ಸಂತೋಷ ಕುಟುಂಬದ ಆಧಾರಶಿಲೆ ತಾಯಿ ಎಂಬುದು ಅಮೃತಕ್ಕಿಂತ ಶ್ರೇಷ್ಠ ತಾಯಿಯ ಪ್ರೀತಿ ಎಲ್ಲರಿಗೂ ಸಿಗಲಿ ಎಂದು 

  ನವಲೆ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ತಾಯಂದಿರ ದಿನಾಚರಣೆಯ ಅಂಗವಾಗಿ ಹಿರಿಯ ಮಾತೆಯರಿಗೆ ಹಮ್ಮಿಕೊಳ್ಳಲಾದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ರಾಜಯೋಗಿನಿ ಪ್ರಜಾ ಪಿತಾ  ಬ್ರಹ್ಮಕುಮಾರಿ  ಸ್ವಾತಿ ಅಕ್ಕನವರು  ಮಾತನಾಡಿದರು

ತಾಯಿ ಎಂಬ ಶಬ್ದ ನಮ್ಮ ಜೀವನದ ಅತಿ ದೊಡ್ಡ ಶಕ್ತಿ ತಾಯಿಯ ಪ್ರೀತಿ ಮತ್ತು ಆಶೀರ್ವಾದ ಪ್ರಪಂಚದ ಯಾವ ಸಿರಿ ಸಂಪತ್ತಿಗೂ ಸರಿಸಮಾನವಾಗಿರುವುದಿಲ್ಲ ತಾಯಿಯನ್ನು ಗೌರವಿಸುವುದು ನಮ್ಮ ನಿಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದ ಅವರು ಅಮ್ಮನ ಪದದಲ್ಲಿ ದೈವತ್ವವಿದೆ ಅವಳು ನಮ್ಮ ಬಾಳಿನ ದಾರಿದೀಪ ಅವಳ ಋಣವನ್ನು ತೀರಿಸಲು ಸಾಧ್ಯವಿಲ್ಲ ಬದುಕಿನಲ್ಲಿ ಬರುವ ಕಷ್ಟಗಳನ್ನು ತಾನು ತನ್ನ ಮಡಿಲಿಗೆ ಹಾಕಿಕೊಂಡು ಮಕ್ಕಳಿಗೆ ಸುಂದರವಾದ ಬದುಕನ್ನು ರೂಪಿಸುವಲ್ಲಿ ತಾಯಿ ಪ್ರಮುಖ ಪಾತ್ರವನ್ನು ವಹಿಸಿದ್ದಾಳೆ ತಾಯಿಯ ಪ್ರೀತಿ ಮತ್ತು ತ್ಯಾಗಕ್ಕಾಗಿ ಪ್ರತಿಯಾಗಿ ನಾವು ಏನು ನೀಡಿದರು ಅದು ಕಡಿಮೆ ಅವಳ ಬಗ್ಗೆ ಗೌರವ ಹಾಗೂ ಕೃತಜ್ಞತಾ ಭಾವನೆಯನ್ನು ಇಟ್ಟುಕೊಳ್ಳುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ನುಡಿದರು.ಇದೇ ಸಂದರ್ಭದಲ್ಲಿ 93  ವಸಂತಗಳನ್ನ ಕಳೆದ ಮಾತೆ ಲಲಿತಮ್ಮ 

 ಹಾಗೂ 77 ವಸಂತಗಳನ್ನ ಕಳೆದ ಮಾತೆ ವಿನೋದಮ್ಮನವರಿಗೆ ಪ್ರೀತಿಯಿಂದ ಸನ್ಮಾನಿಸಿ ಗೌರವಿಸಲಾಯಿತು ಹಾಗೆ ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ಮಾತೆಯರಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು. ಮಾತೆಯರು ಕುಟುಂಬದ ಕಣ್ಣು ಅವರು ಸದಾ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಂಡರೆ ಕುಟುಂಬ ಪರಿಪೂರ್ಣವಾಗಿ ಸುಂದರವಾಗಿ ಇರುತ್ತದೆ ಆಸೆ ವ್ಯಾಮೋಹಗಳನ್ನು ತ್ಯಜಿಸಿ ಪರಮಾತ್ಮನ ನಾಮಸ್ಮರಣೆಯಲ್ಲಿ ನಮಗೆ ಸಕಲವೂ ದೊರಕುತ್ತದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ  ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ  ಉಪಾಧ್ಯಕ್ಷರಾದ  ರೊಟೇರಿಯನ್  ಜಿ ವಿಜಯ್ ಕುಮಾರ್ಯವರು  ಸಂಸ್ಥೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳು ಯೋಗ,ಆಧ್ಯಾತ್ಮಿಕ, ನೀತಿಶಾಸ್ತ್ರ, ಪ್ರಾಯೋಗಿಕ ಮನೋವಿಜ್ಞಾನ, ತತ್ವಶಾಸ್ತ್ರ, ವಿಶ್ವ ಇತಿಹಾಸ ಮತ್ತು ಸಂಸ್ಕೃತಿಯ ಸಾರಾಂಶ, ಸಮಾಜಶಾಸ್ತ್ರ, ಮತ್ತು ಹಲವಾರು ಇತರ ವಿಷಯಗಳ ಮಿಶ್ರಣವಾಗಿದೆ. ಈ ಸಂಸ್ಥೆಯು ಪ್ರತಿಯೊಬ್ಬ ವ್ಯಕ್ತಿಯಲ್ಲಿನ ತನ್ನ ಆದ್ಯಾತ್ಮಿಕ ಆಂತರಿಕ ಪ್ರತಿಭೆಯನ್ನು ಗುರುತಿಸುತ್ತದೆ ಮತ್ತು ತಮ್ಮೊಳಗಿನ ವ್ಯಕ್ತಿತ್ವ ವನ್ನು ಮರುಶೋಧಿಸಲು ಸಹಾಯ ಮಾಡುತ್ತದೆ. ಜಾತಿ, ಮತ, ವಯಸ್ಸು ಮತ್ತು ಸಾಮಾಜಿಕ, ಆರ್ಥಿಕ ಅಥವಾ ರಾಜಕೀಯ ಸ್ಥಾನಮಾನವನ್ನು ಲೆಕ್ಕಿಸದೆ ಈ ಸಂಸ್ಥೆ ಎಲ್ಲರಿಗೂ ಮುಕ್ತವಾಗಿದೆ. ಎಂದರು.

ಈ ಸಂದರ್ಭದಲ್ಲಿ ನಾಗು ಅಕ್ಕನವರು. ಸ್ವಾತಿ ಅಕ್ಕನವರು. ಬಿಂದು ವಿಜಯ ಕುಮಾರ್  ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಸದಸ್ಯರು ಉಪಸ್ಥಿತರಿದ್ದರು ಕಾರ್ಯಕ್ರಮದ ನಂತರ ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಯಿತು.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ