ಮೆಲೋಡಿ ರಮೇಶ್ ತಂಡದ ಗಾಯನಕ್ಕೆ ಮೆಚ್ಚುಗೆ
ಶಿವಮೊಗ್ಗ: ಮೆಲೋಡಿ ರಮೇಶ್ ತಂಡದಿಂದ ಎಮ್ಮೆಹಟ್ಟಿಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮೆಚ್ಚುಗೆ ಗಳಿಸಿತು.
ಶ್ರೀ ಉಜ್ಜಯಿನಿ ಮರುಳ ಸಿದ್ದೇಶ್ವರ ಸ್ವಾಮಿಯ ನೂತನ ದೇವಸ್ಥಾನ ಉದ್ಘಾಟನೆ ಪ್ರಯುಕ್ತ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.
ಮೆಲೋಡಿ ರಮೇಶ್ ತಂಡದಿಂದ ಭಕ್ತಿಗೀತೆ, ಭಾವಗೀತೆ ಹಾಗೂ ಜನಪದ ಗೀತೆಗಳ ಮನಮೋಹಕ ಕಾರ್ಯಕ್ರಮ ನಡೆಯಿತು. ಕೀಬೋರ್ಡ್ ಮತ್ತು ಕೊಳಲು ವಾದನವನ್ನು ಶಿವಮೊಗ್ಗದ ಎಲ್.ವೇಣುಗೋಪಾಲ್ ನಿರ್ವಹಿಸಿದರು.
ಗಾಯಕರಾಗಿ ಮೆಲೋಡಿ ರಮೇಶ್, ಮೇಘನಾ, ಆಕಾಶವಾಣಿ ಗಾಯಕರಾದ ಎಲ್.ವೇಣುಗೋಪಾಲ್ ಹಾಗೂ ಹಿನ್ನೆಲೆ ಗಾಯಕರಾದ ಆರ್.ಸುಮಿತ್ ಭಾಗವಹಿಸಿದ್ದದರು. ತಬಲಾ ವಾದನವನ್ನು ಪ್ರಶಾಂತ್ ಮತ್ತು ರಿದಮ್ ಅನ್ನು ವಿಠ್ಠಲ್ ನಿರ್ವಹಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು.
ಕಾರ್ಯಕ್ರಮಕ್ಕೆ ಗ್ರಾಮಸ್ಥರು ಭಾರಿ ಸಂಖ್ಯೆಯಲ್ಲಿ ಹಾಜರಾಗಿದ್ದರು. ಕಲಾವಿದರ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ