ಅನ್ನರಾಮಯ್ಯ


 ಅನ್ನರಾಮಯ್ಯ ಎಂದೆ ಬಡ ಜನರು ಕರೆಯಲ್ಪಡುವ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ   ವೈಚಾರಿಕ ರಾಜಕರಣದ ಪ್ರತಿರೂಪವಾದ  ಸಿದ್ದರಾಮಯ್ಯ  70 -80 ರ ದಶಕದಲ್ಲಿ   ಬೆಳೆದ  ಸಮಾಜವಾದಿ ಸೈದ್ದಾಂತಿಕ ನಿಲುವು ಹೊಂದಿದ್ದ  ಎರಡನೇ ತಲೆಮಾರಿನ  ಕೊನೆಯ ಕೊಂಡಿ.

     ಸಮಾಜವಾದಿಗಳ ಪ್ರಭಾವದಿಂದ ರೈತ ಚಳುವಳಿ ಮತ್ತು    ಜನತ ಪರಿವಾರದಲ್ಲಿ ಬೆಳೆದ ಸಿದ್ದರಾಮಯ್ಯ ಮೂಲ ಕಾಂಗ್ರೆಸ್ ಪಾರ್ಟಿಯವರಾಗಿರದೆ   ಕಾಂಗ್ರೆಸ್ ನಡೆಯನ್ನು  ವಿರೋಧಿಸಿಕೊಂಡು ಬಂದಿದ್ದರು.

       ಕೆಲವು ಬದಲಾದ ರಾಜಕೀಯ ಬೆಳವಣಿಗೆಯಲ್ಲಿ   ಅಹಿಂದ ನಾಯಕರಾಗಿ ಹೊರಹೊಮ್ಮಿ   ದೇವೆಗೌಡರಂತವರಿಗೆ  ಸೆಡ್ಡು ಹೊಡೆದು ನಿಂತು  ಗಟ್ಟಿ ಧ್ವನಿಯಲ್ಲೆ  ಅವರನ್ನು  ಎದುರಿಸಿ   ಅಸ್ಥಿತ್ವ   ಗಟ್ಟಿಕೊಳ್ಳಿಸಿಕೊಂಡ ಸಮಯದಲ್ಲಿ   ಕಾಂಗ್ರೆಸ್   ಸಿದ್ದರಾಮಯ್ಯನವರನ್ನು  ಪಕ್ಷಕ್ಕೆ  ಸೇರಿಸಿಕೊಂಡಿತು.  

      ಕೆಲವು ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ  ಪಕ್ಷಕ್ಕೆ  ಬಂದಿದ್ದನ್ನು  ವಿರೋಧಿಸಿದ್ದರು ಆದರೆ  ಕಾಂಗ್ರೆಸ್ ಹೈ ಕಮಾಂಡ್  ಸಿದ್ದರಾಮಯ್ಯ  ಶಕ್ತಿಯನ್ನು  ತಿಳಿದಿತ್ತು   ಹಲವು ದಶಕಗಳ ಆಡಳಿತ ನಡೆಸಿದ್ದ  ರಾಷ್ಟ್ರೀಯ ಪಕ್ಷವಾಗಿದ್ದರು  ಕಾಂಗ್ರೆಸ್ ಕರ್ನಾಟಕದಲ್ಲಿ   ಮಾಸ್ ಲೀಡರ್ ರವರ  ಅನುಪಸ್ಥಿತಿಯಲ್ಲಿದ್ದಾಗ ಆ ಸ್ಥಾನವನ್ನು  ತುಂಬಿದವರು ಮಾನ್ಯ ಸಿದ್ದರಾಮಯ್ಯ ನವರು .   

    ಕುಮಾರಸ್ವಾಮಿ ಯಡಿಯುರಪ್ಪ ನೆತ್ರತ್ವದ 20-20 ಸರ್ಕಾರ,  ಆ ನಂತರ  ಜೆಡಿಎಸ್ ಬಿಜೆಪಿ  ಇವರ ಕಚ್ಚಾಟ, ಆ ನಂತರ ಯಡಿಯುರಪ್ಪ  ನೇತ್ರತ್ವದಲ್ಲಿ   ಬಂದ ಬಿಜೆಪಿ ಸರ್ಕಾರ,   ನಂತರದ ಬೆಳವಣಿಗೆಗಳು  ಸರ್ಕಾರದ ವೈಪಲ್ಯಗಳನ್ನು  ,  ಸರ್ಕಾರದ ಭ್ರಷ್ಟಾಚಾರ,  ಗಣಿದಣಿಗಳ  ದುರಾಂಹಕರ ಆಡಳಿತದ ವಿರುದ್ದ ಸಿಡಿದೆದ್ದು  ಹಮ್ಮಿಕೊಂಡು   ಬೆಂಗಳೂರು to ಬಳ್ಳಾರಿ ಯಾತ್ರೆಗಳು  ಕಾಂಗ್ರೆಸ್  ಮತ್ತೆ ಅಧಿಕಾರಕ್ಕೆ  ಬರುವಂತೆ ಮಾಡಿತು,    ಸಿದ್ದರಾಮಯ್ಯ ನವರು  ಮುಖ್ಯ ಮಂತ್ರಿಯಾಗಿ   ಆ ಐದು ವರ್ಷ ನೀಡಿದ ಆಡಳಿತ  ದೇಶಕ್ಕೆ ಮಾದರಿ ಎಂಬುವಂತ ಆಡಳಿತವನ್ನೆ ನೀಡಿತು,   ಸಿದ್ದರಾಮಯ್ಯರವರ ಪ್ರಾಮಾಣಿಕತೆ, ಧಕ್ಷತೆ,  ಮತ್ತು ಸೈದ್ದಾಂತಿಕ ಬದ್ದತೆಯನ್ನು  ಯಾರು ಪ್ರಶ್ನಿಸಲಾಗದಂತೆ   ಆಡಳಿತ ನೀಡಿದರು.  ನಂತರ  ಚುನಾವಣೆಯಲ್ಲಿ  ಕಾಂಗ್ರೆಸ್  ಬಹುಮತ ಪಡೆಯದಿದ್ದರು  ಕೋಮುವಾದಿ ಬಿಜೆಪಿ  ಅಧಿಕಾರಕ್ಕೆ ಬರಬಾರದು ಎಂಬ ಕಾರಣಕ್ಕಾಗಿ   ಜೆಡಿಎಸ್ ಜೊತೆ   ಸಮೀಶ್ರ ಸರ್ಕಾರ ನಡೆಸಿದರು ಈ ಸಮಯದಲ್ಲಿ   ಹಿಂದೆ ಜೆಡಿಎಸ್ ಪಕ್ಷ ತನ್ನನ್ನು  ಹೊರಹಾಕಿದ್ದ ಬಗ್ಗೆ ಸಿಟ್ಟು  ದ್ವೇಷ ಯಾವುದನ್ನು ಇಟ್ಟು ಕೊಳ್ಳದೆ  ಅಧಿಕಾರ ಹಂಚಿಕೆಗೆ  ಒಪ್ಪಿದ ಸಿದ್ದರಾಮಯ್ಯ  ಮುತ್ಸದ್ದಿತನದ ಪ್ರೌಡಿಮೆಯನ್ನು  ತೊರಿದರು , ನಂತರ ಸಿದ್ದರಾಮಯ್ಯ  ಆಪ್ತ ಕೆಲವು ಶಾಸಕರು ಜೆಡಿಎಸ್ ರಾಜ್ಯಾಧ್ಯಕ್ಷರು ಸೇರಿದಂತೆ  ಕೆಲವರು(ಬಾಂಬೆ ಬಾಯ್ಸ್)   ಬಿಜೆಪಿಯೊಂದಿಗೆ ಕೈ ಜೋಡಿಸಿ   ಬಾಂಬೆಗೆ  ಓಡಿ ಹೋಗಿದ್ದರು ಈ ಸಮಯದಲ್ಲಿ  ಡಿ.ಕೆ.ಶಿವಕುಮಾರ್  ರವರು ಶ್ರಮ ವಹಿಸಿ   ಎಷ್ಟೇ  ಪ್ರಯತ್ನ   ಪಟ್ಟರು  ಸಮಿಶ್ರ ಸರ್ಕಾರ ಉಳಿಸಿಕೊಳ್ಳಲಾಗದೆ ಸರ್ಕಾರ  ಫತನಾವಾಯಿತು.   ಈ ಸಮಯದಲ್ಲಿ  ಮತ್ತೆ  ಜೆಡಿಎಸ್  ನಾಯಕರು  ಸಿದ್ದರಾಮಯ್ಯ ಮತ್ತು ಡಿಕೆಶಿಯವರ ಮೇಲೆಯೇ   ಸುಳ್ಳು ಆರೋಪಗಳನ್ನು  ಹೊರೆಸಿದರು ಆಗಲು ಎದೆ ಗುಂದದ ಸಿದ್ದರಾಮಯ್ಯ ನವರು   ಬಲಿಷ್ಟ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿದರು, ನಂತರ ಬಂದ    ಬಿಜೆಪಿ ನೇತ್ರತ್ವದ 40 ಪರ್ಸೆಂಟ್   ಭ್ರಷ್ಟಾಚಾರದ ವಿರುದ್ದ  ಹೋರಾಟ. ರೂಪಿಸಿ ,   ಸಿದ್ದರಾಮಯ್ಯ ಡಿಕೆಶಿಯವರ ನೇತ್ರತ್ವದಲ್ಲಿ  ಮತ್ತೆ 2023 ರಲ್ಲಿ  ಸರ್ಕಾರ ಅಧಿಕಾರಕ್ಕೆ ಬಂತು  ಈ ಸಮಯದಲ್ಲಿ   ಮುಖ್ಯಮಂತ್ರಿ  ಹುದ್ದೆಗೆ  ಡಿಕೆಶಿ ಮತ್ತು ಸಿದ್ದರಾಮಯ್ಯ  ನಡುವೆ ಪೈ ಪೋಟಿ  ಆರಂಭವಾಗಿತ್ತು ಕಾಂಗ್ರೆಸ್ ಹೈಕಾಮಾಂಡ್  ಸಿದ್ದರಾಮಯ್ಯ ಪರ ಒಲವು ತೊರಿತು,   ಆ ಸಮಯದಲ್ಲಿ   50-50 ರೆಷಿಯೋ ಒಪ್ಪಂದ ಎಂದು ಆಗಲೆ  ಸುದ್ದಿ ಆಗಿತ್ತು,  ಆದು ಸಾರ್ವಜನಿಕವಾಗಿ   ಪ್ರಚಾರವಾಗಿರಲಿಲ್ಲ. 

 ಎರಡನೇ ಬಾರಿ  C M ಆದ ಸಿದ್ದರಾಮಯ್ಯ  ಚುನಾವಣಾ ಪ್ರಣಾಳಿಕೆಯ ಎಲ್ಲಾ  ಪಂಚ ಗ್ಯಾರಂಟಿಗಳನ್ನು  ಜಾರಿಗೊಳಿಸಿದರು,   ಮಹಿಳೆಯರಿಗೆ ಸ್ವಾವಲಂಬನೆ ನೀಡುವ  ಗೃಹಲಕ್ಷ್ಮಿ,  ಉಚಿತ ಬಸ್ ಪ್ರಯಾಣ,   ಉಚಿತ ವಿದ್ಯುತ್ ಇವುಗಳೆಲ್ಲ ಆರಂಭದಲ್ಲಿ  ವಿರೋಧ ಪಕ್ಷಗಳ ಟಿಕೆಗೆ ಗುರಿಯಾದರು ,    ನಂತರ  ಟಿಕಿಸಿದ ಪಕ್ಷಗಳೆ   ಬೆರೆ ರಾಜ್ಯಗಳಲ್ಲಿ   ಇದೆ ಯೋಜನೆಗಳನ್ಬು  ಕಾರ್ಯರೂಪಕ್ಕೆ  ತಂದಿದ್ದು  ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರ್ಕಾರ ದೇಶಕ್ಕೆ ಮಾದರಿ ಆಯಿತು,

     ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯ  ಮಂತ್ರಿ ಆಗಿದ್ದಾಗಲೆ  ಹಲವು  ಕ್ರಾಂತಿಕಾರಕ  ಹೆಜ್ಜೆಯನ್ನು ಇಟ್ಟರು   ಈಡಿ ದೇಶದೊಂದಿಗೆ ಕರ್ನಾಟಕದಲ್ಲು  ವ್ಯಾಪಕವಾಗಿದ್ದ ನಕ್ಸಲ್ ಚಳುವಳಿಯನ್ನು   ಬಂದೂಕಿನ ಮೂಲಕ ಎದುರಿಸುವುದು  ಸೂಕ್ತವಲ್ಲ  ಮನವೊಲಿಸಿ  ಮುಖ್ಯವಾಹಿನಿಗೆ  ತರಬೇಕು  ಎಂಬ  ಚಿಂತನೆ ಹೊಂದಿದ್ದ  ಸಿದ್ದರಾಮಯ್ಯ  ನಕ್ಸಲ್ ಶರಣಾಗತಿ ಮತ್ತು ಪುನರ್ ವಸತಿ ಸಮೀತಿಯನ್ನು  ಮಾಡಿ ಸ್ವತಂತ್ರ  ಹೋರಾಟಗಾರರಾದ ದೊರೆಸ್ವಾಮಿ  ಅಧ್ಯಕ್ಷತೆಯಲ್ಲಿ  ಎ.ಕೆ.ಸುಬ್ಬಯ್ಯ, ಗೌರಿ ಲಂಕೇಶ್ ,  ಇವರುಗಳನ್ನು  ನೇಮಿಸಿತ್ತು ,  ಗೌರಿ ಲಂಕೇಶ್ ರವರ  ಪರಿಶ್ರಮದಿಂದ ಹಲವಾರು  ಜನ ನಕ್ಸಲರನ್ನು ಮುಖ್ಯವಾಹಿನಿಗೆ  ಕರೆತರಲಾಯಿತು.  ನಂತರ ಮತ್ತೆ  2023 ರಲ್ಲಿ   C M  ಆದಾಗ ಮತ್ತೆ  ನಕ್ಸಲ್ ಶರಣಾಗತಿ ಮತ್ತು ನಕ್ಸಲ್ ಪುನರ್ವಸತಿ  ಸಮೀತಿಯನ್ನು  ರಚಿಸಿತು  ಅದರಲ್ಲಿ  ಬಂಜಗೆರೆ ಜಯಪ್ರಕಾಶ್ ,  ಪಾರ್ವತೇಶ್ ಮತ್ತು  ನನ್ನನ್ನು (ಕೆ.ಪಿ.ಶ್ರೀಪಾಲ) ನೇಮಿಸಿತು  ,  ಸಿದ್ದರಾಮಯ್ಯ ನವರ ಸಹಕಾರ  ಮತ್ತು ಬೆಂಬಲದಿಂದ ನಾವು ಮತ್ತು ಶಾಂತಿಗಾಗಿ ನಾಗರೀಕ ವೇದಿಕೆಯ ನೂರ್  ಶ್ರೀಧರ್  ಮತ್ತವರ ತಂಡದೊಂದಿಗೆ ನಿರಂತರ ಪ್ರಯತ್ನಮಾಡಿ  ಕರ್ನಾಟಕ ,ಕೆರಳ ಮತ್ತು ತಮೀಳುನಾಡು ರಾಜ್ಯವನ್ನು  ನಕ್ಸಲ್  ಮುಕ್ತವಾಗಿ ಮಾಡಿದೆವು ನಂತರ ಅವರ ಪುನರ್  ವಸತಿ ವಿಷಯದಲ್ಲಿಯು  ಸಿದ್ದರಾಮಯ್ಯನವರು  ಕೊಟ್ಟ ಸಹಕಾರ,  ಹಾಗೂ ಸಿದ್ದರಾಮಯ್ಯ ನವರ ಸರ್ಕಾರದಲ್ಲಿದ್ದ  ಮುಖ್ಯ ಕಾರ್ಯದರ್ಶಿ ಶ್ರೀಮತಿ  ಶಾಲಿನಿ ರಜಿನೀಶ್  ಮೇಡಂ ಮತ್ತು  ಕೆಲವು  IAS ಮತ್ತು IPS ಅಧಿಕಾರಿಗಳು  ಸಿದ್ದರಾಮಯ್ಯನವರ ಸಹಲೆಯಂತೆ  ಸಹಕರಿಸಿದ್ದು  ಶ್ಲಾಘನೀಯ. 

     ಹಲವು ದಶಕಗಳಿಂದಲೆ  ಬಾಕಿ ಇದ್ದ ಒಳ ಮೀಸಲಾತಿಯ ಕೂಗಿನ ಬಗ್ಗೆ  ಜಸ್ಟೀಸ್  ನಾಗಮೋಹನ್ ದಾಸ್ ರವರ  ಸಮೀತಿ ರಚಿಸಿದ್ದು  , ಅವರು ನೀಡಿದ ವರದಿಯನ್ನು  ಜಾರಿಗೊಳಿಸಿದ್ದು    ಈ ತರದ ಒಂದೇ ಎರಡೇ  ಸಿದ್ದರಾಮಯ್ಯ  ನವರ ಜನಪರ,ಜನಸ್ನೇಹಿ ಕಾರ್ಯಕ್ರಮಗಳು.  

    ಸಿದ್ದರಾಮಯ್ಯ ನವರ  ಆಡಳಿತ ವೈಕರಿಯು  ಜನಪರ ಸಮಾಜಮುಖಿಯಾಗಲು  ಅವರ ನಿಸ್ವಾರ್ಥ ,ಪ್ರಮಾಣಿಕ ಸೇವೆಯ ಮನೋಭಾವದ. ಜೊತೆಗೆ  ಅವರ  P S ಆಗಿದ್ದ  ಹಿರಿಯ KAS ಅಧಿಕಾರಿ  ನಲ್ಕುಂಟೆ ವೆಂಕಟೆಶಯ್ಯನವರು,  ಹಿರಿಯ IAS ಅಧಿಕಾರಿ  ಅಥಿಕ್ ಸರ್ ರಂತಹ ಅಧಿಕಾರಿಗಳು ಸಹ ಕಾರಣಿ ಭೂತರು.  

        ಕಾಂಗ್ರೆಸ್  ಪಕ್ಷದ ಸದಸ್ಯನಲ್ಲದ ನನ್ನಂತವರನ್ನು  ಸಿಂಡಿಕೇಟ್ ಸದಸ್ಯರನ್ನಾಗಿ  ನೇಮಿಸಿದ ಸಿದ್ದರಾಮಯ್ಯ ಸರ್, ಮಧುಬಂಗಾರಪ್ಪ ಸರ್,   ನಲ್ ಕುಂಟೆ ವೆಂಕಟೇಯ್ಯ ಇವರಿಗೆ  ನಾನು ಋಣಿಯಾಗಿರುವೆ,   ನಾನು  ಇವರುಗಳ ಆಶಯದಂತೆ ಅತ್ಯಂತ ಪ್ರಮಾಣಿಕವಾಗಿ  ಅನ್ಯಾಯದ ವಿರುದ್ದ  ದ್ವನಿಯಾಗಿ  ನನ್ನನ್ನು  ನೇಮಿಸಿದವರುಗಳಿಗೆ  ಕಳಂಕ ಬಾರದಂತೆ  ಕರ್ತವ್ಯ ನಿರ್ವಹಿಸುತ್ತಿದ್ದೇನೆ. 

    ಸಿದ್ದರಾಮಯ್ಯನವರಿಗೆ   ಇತ್ತಿಚೆಗೆ   ವಯೋ ಸಹಜವಾದ ಮರೆವು ಬಂದಿತ್ತು  ಜೊತೆಗೆ  ಸ್ವಲ್ಪ. ಸುಸ್ತಾದವರಂತೆ  ಕಂಡುಬರುತ್ತಿದ್ದರು, 

 ಸಿದ್ದರಾಮಯ್ಯ ಮತ್ತು  ಡಿಕೆಶಿಯವರ ನಡುವೆ ಅಧಿಕಾರದ ಹಸ್ತಾಂತರಕ್ಕೆ  ಭಿನ್ನಾಭಿಪ್ರಾಯ ಅಂತ ಮಾದ್ಯಮಗಳು ಮತ್ತು  ವಿರೋಧ ಪಕ್ಷಗಳು   ದಿನಾಂಪ್ರತಿ ಸುಳ್ಳು ಪ್ರಚಾರ ಮಾಡುತ್ತಲೆ  ಬಂದರು  ಆದರೆ  ಇದೆಲ್ಲವು  ಸುಳ್ಳು ಪ್ರಾಚಾರವಾಗಿತ್ತು  ಇಬ್ಬರು ನಾಯಕರು  ಅತ್ಯಂತ ಆತ್ಮೀಯ ವಾಗಿಯೇ   ಕಳೆದ ಮೂರು ವರ್ಷ ಅಧಿಕಾರ ನಡೆಸಿದರು.  ಈಗಲೂ ಸಹ ವಿರೋಧ ಪಕ್ಷಗಳಿಗೆ  ಹೊಟ್ಟೆಉರಿಯುವ ರೀತಿಯಲ್ಲಿ  ಇಬ್ಬರು ನಾಯಕರು   ಆತ್ಮೀಯ ವಾಗಿಯೆ ಇದ್ದು  ಸಿದ್ದರಾಮಯ್ಯ ವಿದಾಯಹೇಳಿದ್ದಾರೆ.       

   ಸಿದ್ದರಾಮಯ್ಯರವರ ವಿದಾಯ   ಒಂದು ತಲೆಮಾರಿನ ವೈಚಾರಿಕತೆಯ ರಾಜಕರಣವನ್ನು  ಕೊನೆಗೊಳಿಸಿದೆ.    ಕಾಂಗ್ರೆಸ್ ಕಟ್ಟಾಳುವಾಗಿ  ಪಕ್ಷದ ನಿಷ್ಠಾವಂತ ನಾಯಕನಾಗಿದ್ದ ಡಿಕೆಶಿಯವರು  ಕಾಂಗ್ರೆಸ್ ಅಧಿಕಾರಕ್ಕೆ  ಬರಲು  ಅವರ ಶ್ರಮವು ಇದೆ,  ಇನ್ನೆರಡು ವರ್ಷ ಡಿಕೆಶಿಯವರು  CM ಆಗಿ ಒಳ್ಳೆಯ ಅಧಿಕಾರ ನೀಡಲಿ  ಹಾಗೆಯೆ  ಸಿದ್ದರಾಮಯ್ಯ ನವರು   ತಮ್ಮ ಅನುಭವವನ್ನು   ಡಿಕೆಶಿಯವರಿಗೆ  ದಾರೆಯೆರೆದು  ಡಿಕೆಶಿಯವರಿಗೆ ಮಾರ್ಗದರ್ಶನ ನೀಡಲಿ.   ಹಾಗೆಯೇ ಕಾಂಗ್ರೆಸ್ ಹೈ ಕಮಾಂಡ್  ಬಯಸಿದಂತೆ   ಸಿದ್ದರಾಮಯ್ಯ  ಹೈ ಕಮಾಂಡ್ ರಾಜಕಾರಣದಲ್ಲಿ ಸಕ್ರೀಯರಾಗಿ   ಕಾಂಗ್ರೆಸ್ ಸರ್ಕಾರಗಳಿರುವಲ್ಲಿ   ಒಳ್ಳೆಯ ಆಡಳಿತ ನೀಡುವಂತೆ ಮಾಡಲಿ.  

       


- ಕೆ.ಪಿ.ಶ್ರೀಪಾಲ, ವಕೀಲರು, ಶಿವಮೊಗ್ಗ. ಮೊ : 9448329757.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ