ಮ್ಯಾಂಗೋ ಫುಡ್ ಫೆಸ್ಟಿವಲ್ ಉದ್ಘಾಟನೆ- ಮಹಿಳಾ ಸಬಲೀಕರಣಕ್ಕೆ ವಸ್ತು ಪ್ರದರ್ಶನಗಳು ಅತ್ಯವಶ್ಯಕ- ಪಾಲಿಕೆ ಮಾಜಿ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್
ನಗರದ ಶುಭಮಂಗಳ ಕಲ್ಯಾಣ ಮಂದಿರದಲ್ಲಿ ಮೂರು ದಿನಗಳ ಕಾಲ ಜೆಸಿಐ ಶಿವಮೊಗ್ಗ ಭಾವನಾ ಹಾಗೂ ಶ್ರೀ ಸಾಯಿ ಇವೆಂಟ್ಸ್ ರವರು ಆಯೋಜಿಸಿರುವ ಮ್ಯಾಂಗೋ ಫುಡ್ ಫೆಸ್ಟಿವಲ್ ಮತ್ತು ಜೀವನಶೈಲಿ ವಸ್ತು ಪ್ರದರ್ಶನವನ್ನು ಮಹಾನಗರ ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ರವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ವಸ್ತುಪ್ರದರ್ಶನಗಳಿಂದ ಮಹಿಳೆಯರ ಸಬಲೀಕರಣ ಉನ್ನತಿ ಕಾಣುವುದರೊಂದಿಗೆ ಮಹಿಳೆಯರು ಸಕ್ರಿಯವಾಗಿ ಇಂತಹ ವಸ್ತು ಪ್ರದರ್ಶನ ಮತ್ತು ಫೆಸ್ಟಿವಲ್ ಗಳಲ್ಲಿ ಪಾಲ್ಗೊಳ್ಳುವುದರಿಂದ ಸದೃಢತೆ ಹೆಚ್ಚಾಗಿ ಯಶಸ್ಸಿನ ಸಾಧನೆ ಮಾಡಲು ಅನುಕೂಲಕರವಾಗಿದೆ. ಮೂರು ದಿನಗಳ ಕಾಲ ಆಯೋಜಿಸಿರುವ ಮ್ಯಾಂಗೋ ಫುಡ್ ಫೆಸ್ಟಿವಲ್ ನಲ್ಲಿ ರುಚಿಕರವಾದ ಖಾದ್ಯಗಳು ,ತಿಂಡಿ ತಿನಿಸುಗಳು ಮನೆಯಿಂದಲೇ ಗೃಹಿಣಿಯರು ತಯಾರು ಮಾಡಿದ ಆಹಾರ ಪದಾರ್ಥಗಳನ್ನು ಶಿವಮೊಗ್ಗ ನಗರದ ನಾಗರಿಕ ಬಂಧುಗಳು ಸವಿದು, ಗೃಹ ಉಪಯೋಗಿ ವಸ್ತುಗಳು, ಸಿದ್ಧ ಉಡುಪುಗಳು, ವಿಶೇಷ ಕಲಾಕೃತಿಗಳ ವಸ್ತು ಪ್ರದರ್ಶನ ಮತ್ತು ಮಾರಾಟದಲ್ಲಿ ಪಾಲ್ಗೊಂಡು ಮಹಿಳೆಯರ ಸ್ವಾವಲಂಬಿ ಬದುಕಿಗೆ ಬೆಂಬಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಜೆಸಿಐ ಸಂಸ್ಥೆಯ ಗೌರೀಶ್ ಭಾರ್ಗವ್, ಜೆಸಿಐ ಶಿವಮೊಗ್ಗ ಭಾವನಾ ಅಧ್ಯಕ್ಷರಾದ ಕರಿಬಸಮ್ಮ ಆನಂದ್, ಶ್ರೀ ಸಾಯಿ ಇವೆಂಟ್ಸ್ನ ಸೋಮೇಶ್, ರಾಜೇಶ್ವರಿ, ರುದ್ರೇಶ್, ಪ್ರಮುಖರಾದ ಗಣೇಶ್ ಪೈ, ಸುಶೀಲ ಷಣ್ಮುಗಂ ಹಾಗೂ ಇತರರು ಉಪಸ್ಥಿತಿ ಇದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ