ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಬೇಂಚ್ ಸ್ಥಾಪನೆಗೆ : ಬೃಹತ್ ಪ್ರತಿಭಟನಾ ಜಾಥ
ಶಿವಮೊಗ್ಗ, ಮೇ 30 : ಹೈಕೋರ್ಟ್ ಸರ್ಕ್ಯೂಟ್ ಬೇಂಚ್ ಸ್ಥಾಪನೆಗೆ ಆಗ್ರಹಿಸಿ ಜರುಗಿದ ಬೃಹತ್ ಪ್ರತಿಭಟನಾ ಜಾಥ, ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ,ಸಂಸ್ಥೆಯ ಕಾನೂನು ಮಾರ್ಗದರ್ಶಕರಾದ ಗೀತಾ ಮಾನೆ ನೇತೃತ್ವದಲ್ಲಿ ಭಾಗಿ.
ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಬೇಂಚ್ ಸ್ಥಾಪನೆಗೆ ಆಗ್ರಹಿಸಿ ಜಿಲ್ಲಾ ವಕೀಲರ ಸಂಘವು ವಿವಿಧ ಸಂಘ -ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಜಾಥದಲ್ಲಿ 'ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ' ಸಂಸ್ಥೆಯು ಪಾಲ್ಗೊಂಡು, ಬೆಂಬಲಿಸಿ ಸಂಸ್ಥೆಯ ಕಾನೂನು ಮಾರ್ಗದರ್ಶಕರಾದ ಗೀತಾ ಮಾನೆ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ, ಮುಖ್ಯ ನ್ಯಾಯಾದೀಶರಿಗೆ ಹಾಗೂ ಮುಖ್ಯಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿತು.
ಮನವಿಯಲ್ಲಿ ಪ್ರಸ್ತಾಪಿಸಿಸದಂತೆ ಶಿವಮೊಗ್ಗ ಜಿಲ್ಲೆಯು ಮಧ್ಯ ಕರ್ನಾಟಕದ ಭಾಗವಾಗಿದ್ದು, ಇಲ್ಲಿನ ನಾಗರೀಕ ನ್ಯಾಯಕ್ಕಾಗಿ, ಹಿತಕ್ಕಾಗಿ ಹಾಗೂ ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಬೇಂಚ್ ಸ್ಥಾಪನೆಗೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ವಕೀಲರ ಸಂಘದಿಂದ ನಡೆಸುತ್ತಿರುವ ಹೋರಾಟಕ್ಕೆ ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ? ಬೆಂಬಲಿಸಿದೆ ಎಂದಿದೆ.
ಶಿವಮೊಗ್ಗ ಸೇರಿದಂತೆ ವಿಭಾಗೀಯ ಮಟ್ಟದಲ್ಲಿ ಹಾಗೂ ಮಧ್ಯ ಕರ್ನಾಟಕದ ಭಾಗವಾಗಿರುವ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಗಳ ನಾಗರೀಕರು ಮಂಗಳೂರಿಗೆ ಪಯಣಿಸಿ ಕಾನೂನು ಕೇಸುಗಳನ್ನು ಇತ್ಯರ್ಥ ಪಡಿಸಿಕೊಳ್ಳುವುದಕ್ಕೆ ಸುಗಮವಾಗಲು ಸಾಧ್ಯವಾಗುವುದಿಲ್ಲ, ಬದಲಿಗೆ ಯಾವುದೇ ಅಂಕಿ ಅಂಶಗಳ ಕೇಸುಗಳು, ಪ್ರತಿಕೂಲ ವಾತಾವರಣ, ಪ್ರವಾಸದ ಅನುಕೂಲತೆಗಳು, ಆರ್ಥಿಕ ಸ್ಥಿತಿಗತಿಗಳು, ಪ್ರಾಕೃತಿಕ ವಿಕೋಪಗಳು, ಶಿವಮೊಗ್ಗ ಜಿಲ್ಲಾ ವಿಭಾಗವಾದ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲಾ ಜನತೆಗೆ ತಂದೊಡ್ಡುವ ಬಹುದೊಡ್ಡ ಸಮಸ್ಯೆಗಳಾಗಿದ್ದು ಇದನ್ನು ಪರಿಗಣಿಸಿದೆ ಕಳೆದ ಅವಧಿಯ ಮುಖ್ಯಮಂತ್ರಿಗಳು ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಲು ಅನುಮತಿ ಕೋರಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿರುವುದು ಅವೈಜ್ಞಾನಿಕವಾಗಿದೆ ಎಂದು ?ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ? ಸಂಸ್ಥೆಯು ಆವಗಾಹನೆಗೆ ತರಬಯಸುತ್ತದೆ ಎಂದು ತಿಳಿಸಿದೆ.
ಮಂಗಳೂರು ಪೀಠದ ಸ್ಥಾಪನೆಗೆ ರಾಜ್ಯ ಸರ್ಕಾರದ ಇಚ್ಚಾಶಕ್ತಿ ಇದ್ದರೆ ಇದರಲ್ಲಿ ಜೋಡಿಸಲಾಗಿರುವ ಶಿವಮೊಗ್ಗ ಹಾಗೂ ಮಧ್ಯ ಕರ್ನಾಟಕದ ಜಿಲ್ಲೆಗಳನ್ನು ಕೈ ಬಿಡಬೇಕು, ಹಾಗೂ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಮುಂದಾಗಬೇಕೆಂದು ತಿಳಿಸಿರುವುದು, ಮಧ್ಯ ಕರ್ನಾಟಕದ ಜನತೆಗೊಂದು ಸಾಮಾಜಿಕ ನ್ಯಾಯವಾಗಿದೆ, ಹೀಗಾಗಿಯೇ ಇದರ ಅನಾನುಕೂಲತೆಗಳನ್ನು ಮನನ ಮಾಡಿಕೊಂಡಿರುವ ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಧರಣಿಗೆ ?ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ? ಸಂಸ್ಥೆ ಬೆಂಬಲಿಸಿ ಈ ಮೂಲಕ ಶಿವಮೊಗ್ಗ ಹೈಕೋರ್ಟ್ ಸರ್ಕ್ಯೂಟ್ ಬೇಂಚ್ ಸ್ಥಾಪನೆಗೆ ಶಿಫಾರಸ್ಸು ಮಾಡಲು ಆಗ್ರಹಿಸುತ್ತದೆ, ಇನ್ನೂ ಇದರ ಗಂಭೀರತೆ ರಾಜ್ಯ ಸರ್ಕಾರ ಗೊತ್ತು ಮಾಡಿಕೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಈ ಅವೈಜ್ಞಾನಿಕ ಪತ್ರ ನಡೆಯ ವಿರುದ್ದ ಕಾನೂನು ರಿತ್ಯಾ ಹೋರಾಟಕ್ಕೆ 'ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ' ಮುಂದಾಗುತ್ತದೆ ಎಂದು ಈ ಮೂಲಕ ತಿಳಿಸಿದೆ.
ಪ್ರತಿಭಟನೆಯಲ್ಲಿ ಸಂಸ್ಥೆಯ ರಾಜ್ಯಾದ್ಯಕ್ಷರಾದ ಗಾರಾ.ಶ್ರೀನಿವಾಸ್, ಉಪಾಧ್ಯಕ್ಷರಾದ ಎಲ್.ಕೆ ಪರಮೇಶ್ವರ್, ಪ್ರಧಾನ ಕಾರ್ಯದರ್ಶಿ ನವೀನ್ ತಲಾರಿ, ನಿರ್ದೇಶಕರುಗಳಾದ ದಯಾನಂದ್ ಸೋಗಾನೆ, ಎನ್.ಎಂ ಸಿಬ್ಗತ್ ಉಲ್ಲಾ, ಚಿರಂಜೀವಿ ಬಾಬು, ಲೋಕೇಶ್ ಫೈಲ್ವಾನ್, ರೇಕೇಶ್ ಮಾನೆ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ