"ನಕಲಿ ವೈದ್ಯರು”ಗಳ ವಿರುದ್ಧ ಕ್ರಮ ಕೈಗೊಳ್ಳಲು ಸಿದ್ದರಾದ ಶಿವಮೊಗ್ಗ ಜಿಲ್ಲಾ ಆಯುಷ್
ದೇಶದ ವಿವಿಧ ಭಾಗಗಳಲ್ಲಿ ಮೂಲವ್ಯಾಧಿ (Piles), ಫಿಸ್ಚುಲಾ ಮತ್ತು ಫಿಶರ್ ಚಿಕಿತ್ಸೆಯ ಹೆಸರಿನಲ್ಲಿ ನಕಲಿ ವೈದ್ಯರು ಹಾಗೂ ಅನಧಿಕೃತ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಅರ್ಹತೆ ಇಲ್ಲದೆ ವೈದ್ಯರಂತೆ ವರ್ತಿಸಿ ಶಸ್ತ್ರಚಿಕಿತ್ಸೆ ನಡೆಸುತ್ತಿರುವವರ ವಿರುದ್ಧ ಇದೀಗ ಆರೋಗ್ಯ ಇಲಾಖೆ ಹಾಗೂ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ.ಇತ್ತೀಚೆಗೆ ಕರ್ನಾಟಕದ ಹೈಕೋರ್ಟ್ ಒಂದು ಮಹತ್ವದ ತೀರ್ಪಿನಲ್ಲಿ, ಮೂಲವ್ಯಾಧಿ ಚಿಕಿತ್ಸೆಯಲ್ಲಿ ತೊಡಗಿದ್ದ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಲು ನಿರಾಕರಿಸಿದೆ. “ಅರ್ಹತೆ ಇಲ್ಲದೆ ವೈದ್ಯಕೀಯ ಸೇವೆ ನೀಡುವುದು ಗಂಭೀರ ಅಪರಾಧ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಶಿವಮೊಗ್ಗ ನಗರದಲ್ಲಿಯೂ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದ ಇಬ್ಬರು ನಕಲಿ ವೈದ್ಯರು. ವೈದ್ಯಕೀಯ ಪದವಿ ಅಥವಾ ಮೆಡಿಕಲ್ ಕೌನ್ಸಿಲ್ ನೋಂದಣಿ ಇಲ್ಲದೇ ರೋಗಿಗಳಿಗೆ ಇಂಜೆಕ್ಷನ್, ಆಂಟಿಬಯಾಟಿಕ್ ಔಷಧಿ ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು. ಚಂದ್ರೋದಯ ಪತ್ರಿಕೆ ಮೂಲಕ ದಾಖಲಾತಿಗಳೊಂದಿಗೆ, ಸಂಬಂದಿಸಿದ ಇಲಾಖೆಗೆ ದೂರು ಸಲೀಸಾಲಾಗಿದ್ದು, ಶೀಘ್ರದಲ್ಲೇ ಅಧಿಕೃತ ಕ್ಲಿನಿಕ್ ಗೆ ಪರ್ಮನೆಂಟ್ ಬೀಗ ಬೀಳಲಿದೆ.
ವಿದ್ಯಾನಗರದ ಫಿಟ್ನೆಸ್ ಜಿಮ್ ಪಕ್ಕದ ರಸ್ತೆಯಲ್ಲಿ ಮತ್ತು ಜೈಲ್ ರಸ್ತೆಯ ಪಾರ್ವತಿ ಚಾಟ್ಸ್ ಎದುರು ಈ ನಕಲಿ ಕ್ಲಿನಿಕ್ ಗಳು ರಾಜಾರೋಷವಾಗಿ ಜಿಲ್ಲಾಡಳಿತಕ್ಕೆ ಶೇಡ್ಡು ಹೊಡೆದು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿವೆ.
ರಾಜ್ಯದ ರಾಯಚೂರು ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ 18 ನಕಲಿ ವೈದ್ಯರ ವಿರುದ್ಧ ಪ್ರಕರಣ ದಾಖಲಾಗಿದ್ದು, 13 ಕ್ಲಿನಿಕ್‌ಗಳನ್ನು ಮುಚ್ಚಲಾಗಿದೆ. ಅನಧಿಕೃತವಾಗಿ “ಅನುಭವದ ಆಧಾರದಲ್ಲಿ” ಚಿಕಿತ್ಸೆ ನೀಡುತ್ತಿದ್ದ ಹಲವರು ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ಪ್ರಕರಣಗಳಲ್ಲಿ ತಪ್ಪು ಶಸ್ತ್ರಚಿಕಿತ್ಸೆಯಿಂದ ರೋಗಿಗಳ ಜೀವಕ್ಕೂ ಅಪಾಯ ಉಂಟಾಗಿರುವ ಉದಾಹರಣೆಗಳಿವೆ. ಹೊರ ರಾಜ್ಯದಲ್ಲಿ ಮೂಲವ್ಯಾಧಿ ಶಸ್ತ್ರಚಿಕಿತ್ಸೆ ವೇಳೆ ರೋಗಿಯ ಸ್ಥಿತಿ ಗಂಭೀರಗೊಂಡ ಪ್ರಕರಣ ವೈದ್ಯಕೀಯ ಮಂಡಳಿಯ ತನಿಖೆಗೆ ಕಾರಣವಾಗಿದೆ. ಶಸ್ತ್ರಚಿಕಿತ್ಸೆ ನಡೆಸಿದವರು ಅರ್ಹ ವೈದ್ಯರಲ್ಲ ಎಂಬ ಸಂಗತಿ ತನಿಖೆಯಲ್ಲಿ ಬಹಿರಂಗವಾಗಿದೆ.
ಆರೋಗ್ಯ ತಜ್ಞರು ಜನರಿಗೆ ಕೆಲವು ಮಹತ್ವದ ಸಲಹೆಗಳನ್ನು ನೀಡಿದ್ದಾರೆ:
- ವೈದ್ಯರ ನೋಂದಣಿ ಸಂಖ್ಯೆ ಮತ್ತು ಪದವಿಯನ್ನು ಪರಿಶೀಲಿಸಬೇಕು
- “100% ಖಚಿತ ಗುಣಮುಖ” ಎಂಬ ಜಾಹೀರಾತುಗಳಿಗೆ ಮೋಸಹೋಗಬಾರದು
- ಅನುಮಾನಾಸ್ಪದ ಕ್ಲಿನಿಕ್‌ಗಳ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು
- ಶಸ್ತ್ರಚಿಕಿತ್ಸೆಗೆ ಮೊದಲು ನೋಂದಾಯಿತ ಆಸ್ಪತ್ರೆ ಮತ್ತು ತಜ್ಞ ವೈದ್ಯರನ್ನೇ ಸಂಪರ್ಕಿಸಬೇಕು
- ರಾಜ್ಯ ಸರ್ಕಾರಗಳು ಹಾಗೂ ಆರೋಗ್ಯ ಇಲಾಖೆ ನಕಲಿ ವೈದ್ಯರ ವಿರುದ್ಧ ವಿಶೇಷ ಕಾರ್ಯಾಚರಣೆಗಳನ್ನು ಮುಂದುವರೆಸಿದ್ದು, ಸಾರ್ವಜನಿಕರೂ ಜಾಗೃತರಾಗಬೇಕಾಗಿದೆ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
- ನವೀನ್ ತಲಾರಿ


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ