ಶಿವಮೊಗ್ಗ ತುಂಗಾ ಹೊಳೆಯ ಸೇತುವೆ ನಿರ್ಮಾಣ ಮಾಡಿಕೊಡಲು ಲೋಕೋಪಯೋಗಿ ಸಚಿವರಿಂದ ಭರವಸೆ


ಹೆಚ್ ಸಿ ಯೋಗೇಶ್ ರವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮಾನ್ಯ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ತುಂಗಾ ಹೊಳೆ ಸೇತುವೆಯ ವಿಚಾರವಾಗಿ,

ಶಿವಮೊಗ್ಗ ನಗರಕ್ಕೆ ಮಹಾದ್ವಾರವಾಗಿರುವ ತುಂಗಾ ನದಿ ಸೇತುವೆ ಸುಮಾರು ನೂರು ವರ್ಷಗಳಾಗಿದ್ದು ಈ ಒಂದು ಸೇತುವೆಗೆ ಇದರದ್ದೇ ಆದ ಇತಿಹಾಸವು ಇದೆ, ಅಂದಿನ ಮಹಾರಾಜರುಗಳಿಂದ ಹಿಡಿದು ಈಗಲೂ ಸಹ ಸುಮಾರು ಕೋಟ್ಯಂತರ ಜನರು ಈ ಸೇತುವೆ ಮೇಲೆ ಓಡಾಡಿದ್ದಾರೆ, ಇದುವರೆಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದೆ ಅನಾಹುತಗಳು ಸಹ ಆಗಿರುವುದಿಲ್ಲ. ಶಿವಮೊಗ್ಗ ನಗರದಲ್ಲಿನ ತುಂಗಾ ಹೊಳೆಯನ್ನು ದಾಟಿ ಬೇರೆ ಬೇರೆ ನಗರಗಳಿಗೆ ಸಂಪರ್ಕ ಒದಗಿಸಿ ಪ್ರಯಾಣಿಸಲು ಅನುಕೂಲವಾಗಿದೆ. ಮಳೆಗಾಲದಲ್ಲಿ ಬಾಗಿನ ಬಿಡುವುದು ಪೂಜೆಗಳನ್ನು ನೆರವೇರಿಸಿದ್ದು ಸಹ ಇದೆ. 2019ರ ಸಂದರ್ಭದಲ್ಲಿ ಆದಂತಹ ಭಾರಿ ಮಳೆಗೆ ಈ ಸೇತುವೆಗೆ ಬಹಳಷ್ಟು ಭಾಗ ತೊಂದರೆಯಾಗಿದ್ದು ತಾತ್ಕಾಲಿಕವಾಗಿ ಆ ಸಂದರ್ಭದಲ್ಲಿ ಸರ್ಕಾರದ ವತಿಯಿಂದ ಕಾಮಗಾರಿ ಮಾಡಿರುತ್ತಾರೆ. ಶಿವಮೊಗ್ಗದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು ನೂತನ ಉದ್ಯಮಗಳು ಪ್ರಾರಂಭವಾಗಿದ್ದು ಜನರ ಹೋರಾಟವು ಹೆಚ್ಚಾಗಿರುವುದರಿಂದ ಪ್ರತಿನಿತ್ಯ ಈ ಸೇತುವೆ ಮೇಲೆ ಓಡಾಡಲು ತೊಂದರೆಯಾಗುತ್ತಿದ್ದು. 2026–27ನೇ ಸಾಲಿನಲ್ಲಿ ಸುಮಾರು 2,000 ಕೋಟಿ ರೂಪಾಯಿಗಳನ್ನು ರಾಜ್ಯಾದ್ಯಂತ ಸೇತುವೆಗಳ ನಿರ್ಮಾಣತೆಂದು ಇಟ್ಟಿರುವ ಹಣದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಸುಮಾರು 40 ಕೋಟಿ ರೂಪಾಯಿಗಳಷ್ಟು ವೆಚ್ಚವಾಗಲಿದ್ದು ಆದ್ದರಿಂದ ಈ ಹಣವನ್ನು ಬಿಡುಗಡೆಗೊಳಿಸಿ ತತ್ತಕ್ಷಣ ಈ ಕಾಮಗಾರಿಗೆ ಚಾಲನೆ ನೀಡಬೇಕಾಗಿ ಹಾಗೂ ಪ್ರಮುಖ ಆದ್ಯತೆಯನ್ನು ನೀಡಿ ಬಾರಿ ವಾಹನಗಳು ಈ ಸೇತುವೆಯಲ್ಲಿ ಓಡಾಡಲು ಸಾಧ್ಯವಾಗದೇ ಇರುವುದರಿಂದ ಬಹಳಷ್ಟು ತೊಂದರೆಯಾಗುತ್ತಿದ್ದು ಇದರ ವಿಚಾರವಾಗಿ ಮನವಿಯನ್ನು ನೀಡಿದರು, ಈ ಸಂದರ್ಭದಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಎಸ್ ಶಿವಕುಮಾರ್ ಅವರು, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಮ್ ಪಾಷಾ ರವರು, ಜಾಮಿಯಾ ಮಸೀದಿ ಅಧ್ಯಕ್ಷರಾದ ಮುನಾರ್ ಪಾಷರವರು, ಮಧುಸೂದನ್ ರವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ