'ಮಾರ್ನಾಮಿಬೈಲು ಕಿರುಚಿತ್ರೋತ್ಸವ' ಮೊದಲ ಪೋಸ್ಟರ್ ಬಿಡುಗಡೆಗೊಳಿಸಿದ ಮಾಜೀ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ

 


ಶಿವಮೊಗ್ಗ : ನಗರದ ಪತ್ರಿಕಾ ಭವನದಲ್ಲಿ ಗಾರಾ ಗ್ರೂಪ್ ಸಂಸ್ಥೆಯ ಮಾಧ್ಯಮ ವಿಭಾಗವಾದ ಸೂರ್ಯಗಗನ ಮ್ಯಾಗಜಿನ್ ಹಾಗೂ ಇತ್ಯಾದಿ ಪಾಕ್ಷಿಕ ಪತ್ರಿಕೆಗಳು ಆಯೋಜಿಸುತ್ತಿರುವ ಮಾರ್ನಾಮಿಬೈಲ್ ಕಿರುಚಿತ್ರೋತ್ಸವದ ಮೊದಲ ಪೋಸ್ಟರ್ ಮಾಜೀ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪನವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಾರ್ನಾಮಿಬೈಲ್ ಕಿರುಚಿತ್ರೋತ್ಸವ ಸಾಂಸ್ಕೃತಿಕ ಹೆಜ್ಜೆಯಾಗಿದ್ದು ಕಾರ್ಯಕ್ರಮ ಯಶಸ್ವಿಯಾಗಿ ಜರುಗಲಿ ಎಂದು ಹಾರೈಸಿದರು. ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಆಯೋಜಕರಾದ ಗಾರಾ.ಶ್ರೀನಿವಾಸ್, ಅಚ್ಚೆ ಸಿನಿಮಾ ನಿರ್ದೇಶಕ ಯಶೋಧರ್, ಮಲೆನಾಡಿನ ಖಳನಟ ಶ್ರೀನಿವಾಸ್ ಶರ್ಮಾ, ಪತ್ರಕರ್ತರಾದ ದೇಶಾದ್ರಿ, ಬಹುಮುಖಿ ನವೀನ್ ತಲಾರಿ, ಕಿರುಚಿತ್ರ ನಿರ್ದೇಶಕ ನಿತಿನ್, ಕ್ರಿಯೇಟಿವ್ ಗ್ರೂಪ್ ಪರಮೇಶ್ವರ್, ಸಿವಿಲ್ ಇಂಜಿನಿಯರ್ ಭರತ್ ಗುತ್ತಿ, ಕರವೇ ಸ್ವಾಭಿಮಾನಿ ಬಣದ ಸಯ್ಯದ್ ಮುಜಿಬುಲ್ಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ