ಯೋಗದಿಂದ ಮಾನಸಿಕ ಸದೃಢತೆಯ ಜೊತೆಗೆ ದೈಹಿಕ ಆರೋಗ್ಯ ಉತ್ತಮ. - ಸಿ.ವಿ. ರುದ್ರಾರಾಧ್ಯ


ಯೋಗ ಮಾನಸಿಕ ಹಾಗೂ ದೈಹಿಕ ಸದೃಢತೆ ಜೊತೆಗೆ ದೀರ್ಘಾಯುಷ್ಯ ಉಳ್ಳವರಾಗಿ ಮಾಡುವುದರಲ್ಲಿ ಸಂದೇಹವಿಲ್ಲ ಎಂದು ಶಿವಗಂಗಾ ಯೋಗ ಕೇಂದ್ರದ ಯೋಗಾಚಾರ್ಯ ಡಾಕ್ಟರ್ ಸಿ.ವಿ. ರುದ್ರಾರಾಧ್ಯ ನುಡಿದರು ಅವರು ಇಂದು ಶಿವಗಂಗಾ ಯೋಗ ಕೇಂದ್ರದ ರಾಘವ ಶಾಖೆಯಲ್ಲಿ ಏರ್ಪಡಿಸಲಾಗಿದ್ದ ಪರಿಶೀಲನಾ ಸಭೆ ಹಾಗೂ ಶಿವರಾತ್ರಿ ಕಾರ್ಯಕ್ರಮದ  ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು ಸನಾತನ ಕಾಲದ ಯೋಗ ಇಂದಿಗೂ ಪ್ರಸ್ತುತ. ಪ್ರತಿನಿತ್ಯ ಕ್ರಮಬದ್ಧವಾಗಿ ಗುರು ಮುಖೇನ ಯೋಗ, ಪ್ರಾಣಾಯಾಮ ಹಾಗೂ ಧ್ಯಾನ ಮಾಡುವುದರಿಂದ  ಆರೋಗ್ಯದಿಂದ ಇರಲು ಸಾಧ್ಯ ಇದರಿಂದ ನಕಾರಾತ್ಮಕ ಭಾವನೆಗಳು ದೂರವಾಗುತ್ತವೆ  ಜೊತೆಗೆ ಮಾನಸಿಕ ಖಿನ್ನತೆ ದೂರವಾಗುತ್ತದೆ ಏಂದು ನುಡಿದ ಅವರು ಶಿವಗಂಗಾ ಯೋಗ ಕೇಂದ್ರದಲ್ಲಿ ನಡೆಯುವ ಶಿವರಾತ್ರಿ ಜಾಗರಣೆ, ಶಿವನ ವಿಶೇಷ ಪೂಜೆ ಹಾಗೂ ಭಜನಾ ಕಾರ್ಯಕ್ರಮದಲ್ಲಿ ಎಲ್ಲರೂ ತಪ್ಪದೆ ಭಾಗವಹಿಸಲು ಕರೆ ನೀಡಿದರು. ಶಿವಗಂಗಾ ಯೋಗ ಕೇಂದ್ರದ ಮಾಜಿ ಕಾರ್ಯದರ್ಶಿಎಸ್. ಎಸ್ . ಜ್ಯೋತಿ ಪ್ರಕಾಶ ಅವರು ಮಾತನಾಡುತ್ತಾ ಶಿವಗಂಗಾ ಯೋಗ ಕೇಂದ್ರ ನಮ್ಮ ನಾಡಿಗೆ ಒಂದು ವಿಶೇಷವಾದ ಕೊಡುಗೆಯನ್ನು ನೀಡಿದೆ ಶಿವಮೊಗ್ಗದಲ್ಲಿ ಸಾಕಷ್ಟು ಜನ 38 ಕೇಂದ್ರಗಳಲ್ಲಿ ಉಚಿತವಾಗಿ ಯೋಗಭ್ಯಾಸ ನಡೆಸುತ್ತಿರುವುದು ತುಂಬಾ ವಿಶೇಷವಾಗಿದೆ ರಾಜ್ಯಕ್ಕೆ ಒಂದು ಮಾದರಿ ಸಂಸ್ಥೆಯಾಗಿದೆ. ಪ್ರತಿಯೊಬ್ಬರೂ ನಿರಂತರವಾಗಿ ಶಾಖೆಗೆ ತಪ್ಪದೇ ಬಂದು ಯೋಗಭ್ಯಾಸ ಮಾಡಬೇಕೆಂದು ನುಡಿದರು . ರಾಘವ ಶಾಖೆಯ ಮುಖ್ಯ ಶಿಕ್ಷಕರಾದ ಜಿ ಎಸ್ ಓಂಕಾರ್ ಅವರು  ಇಂದಿನ ಒತ್ತಡದ ಪರಿಸ್ಥಿತಿಯಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಹಾಗೂ ಯುವಜನತೆಗೆ ಯೋಗ, ಪ್ರಾಣಾಯಾಮ ಹಾಗೂ ಧ್ಯಾನದ  ಅವಶ್ಯಕತೆಯನ್ನು ತಿಳಿಹೇಳಿದರು. ಯೋಗ ಶಿಕ್ಷಕರಾದ ವಿಜಯ ಕೃಷ್ಣ. ಎಚ್ ಕೆ ಹರೀಶ್. ಜಿ ವಿಜಯಕುಮಾರ್. ಶಂಕರ್, ಸುಜಾತಾ..ಗಾಯತ್ರಿ ಲತಾ. ಶೈಲಾ. ಶೋಭಾ.. ಶ್ರೀನಿವಾಸ್. ಸುಬ್ರಮಣ್ಯ. . ಹಾಗೂ ಯೋಗ ಬಂದು ಗಳು ಉಪಸ್ಥಿತರಿದ್ದರು

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ