ಧ್ಯಾನಸಕ್ತ ಆದಿಯೋಗಿ ಶಿವನಿಗೆ ಭಜನೆ ಹಾಗೂ ಭಕ್ತಿ ಗೀತೆಗಳ ಸಿಂಚನ
ಶಿವಗಂಗಾ ಯೋಗ ಕೇಂದ್ರ ಕಲ್ಲಹಳ್ಳಿಯಲ್ಲಿ ಮಹಾಶಿವರಾತ್ರಿಯ ಅಂಗವಾಗಿ ನಗರದ 38 ಯೋಗ ಶಾಖೆಗಳಿಂದ 500ಕ್ಕೂ ಹೆಚ್ಚು ಶಿಕ್ಷಣಾರ್ಥಿಗಳಿಂದ ಬ್ರಾಹ್ಮಿ ಕಾಲದಲ್ಲಿ ಸಾಮೂಹಿಕ ಭಜನೆ ಮತ್ತು ಭಕ್ತಿಗೀತೆಗಳಿಂದ ಶ್ರೀ ಶಿವಗಂಗಾ ಯೋಗ ಕೇಂದ್ರದ ಸಂಪೂರ್ಣ ಯೋಗ ಆರೋಗ್ಯಧಾಮ ಆವರಣದಲ್ಲಿ ಇರುವ ಧ್ಯಾನಸಕ್ತ ಆದಿಯೋಗಿ ಶಿವನಿಗೆ ಭಜನೆ ಹಾಗೂ ಭಕ್ತಿ ಗೀತೆಗಳ ಸಿಂಚನ ಮಾಡಲಾಯಿತು ಕಾರ್ಯಕ್ರಮದಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರದ ಪ್ರಧಾನ ಕಾರ್ಯದರ್ಶಿಗಳಾದ ಎಚ್ ಎಮ್ ಚಂದ್ರಶೇಖರಯ್ಯ ಮಾತನಾಡುತ್ತಾ ಭಕ್ತಿಗೀತೆಗಳು ಭಜನೆಗಳು ನಮಗೆ ಸಂಸ್ಕಾರವನ್ನ ನೀಡುತ್ತವೆ ನಮ್ಮ ಖಿನ್ನತೆ ದೂರವಾಗುತ್ತದೆ ನಮ್ಮ ದೇಹದಲ್ಲಿ ಭಕ್ತಿ ಭಾವ ಸಿಂಚನವಾಗುತ್ತದೆ ಜೊತೆಗೆ ಧ್ವನಿ ಸಂಸ್ಕರಣ ಗೊಳ್ಳುತ್ತದೆ ಎಂದ ಅವರು ಪ್ರತಿವರ್ಷ ಈ ಸ್ಥಳದಲ್ಲಿ ಸಾವಿರಾರು ಜನ ಯೋಗ ಬಂಧುಗಳು ಭಜನೆ ಹಾಗೂ ಭಕ್ತಿ ಗೀತೆಗಳು ಈ ಸ್ಥಳಕ್ಕೆ ವಿಶೇಷವಾದ ಶಕ್ತಿ ಇದೆ ಎಂದು ನುಡಿದರು 38 ಕೇಂದ್ರದ ಯೋಗ ಬಂದುಗಳು ವಿವಿಧ ರೀತಿಯ ಭಜನೆ ಶಿವನಿಗೆ ಅರ್ಪಿಸಿದರು ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ಜಿಎಸ್ ಓಂಕಾರ್. ವಿಜಯ ಕೃಷ್ಣ. ಹರೀಶ್. ಕಾಟನ್ ಜಗದೀಶ್. ವಿಜಯ ಬಾಯರ್ 38 ಶಾಖೆಗಳ ಶಿಕ್ಷಕರು ಉಪಸ್ಥಿತರಿದ್ದರು

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ