ರೋಟರಿಯಿಂದ ನಿರಂತರ ಸಮಾಜಮುಖಿ ಕಾರ್ಯ


ಶಿವಮೊಗ್ಗ: ರೋಟರಿ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ನಡೆಸುವ ಮೂಲಕ ವಿಶ್ವಾದ್ಯಂತ ಸೇವಾ ಕಾರ್ಯ ನಡೆಸುತ್ತಿದೆ ಎಂದು ನಟ ಓಂಗಣೇಶ್ ಉಪ್ಪುಂದ ಹೇಳಿದರು.

ನಗರದ ಕಾಸ್ಮೋ ಕ್ಲಬ್‌ನಲ್ಲಿ ರೋಟರಿ ಕ್ಲಬ್ ವಲಯ 10 ಮತ್ತು 11ರ ವತಿಯಿಂದ ಆಯೋಜಿಸಿದ್ದ ವಿಶ್ವ ತಿಳವಳಿಕೆ ಮತ್ತು ಶಾಂತಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲರನ್ನು ಒಳಗೊಂಡು ಸೇವಾ ಮನೋಭಾವ ಬೆಳೆಸುವ ಕೆಲಸ ಮಾಡುತ್ತಿರುವ ರೋಟರಿ ಸೇವೆ ಶ್ಲಾಘನೀಯ ಎಂದು ತಿಳಿಸಿದರು.

ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್ ಮಾತನಾಡಿ, ರೋಟರಿ ಸಂಸ್ಥೆಯಲ್ಲಿ ಎಲ್ಲರೂ ಒಟ್ಟಾಗಿ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದು, ರೋಟರಿ ಸದಸ್ಯರ ಸಂಖ್ಯೆ ಹೆಚ್ಚಿಸುವಲ್ಲಿ ಆದ್ಯತೆ ನೀಡಬೇಕು ಎಂದು ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಅಧ್ಯಕ್ಷ ಪ್ರಕಾಶ್ ಮೂರ್ತಿ ಮಾತನಾಡಿ, ರೋಟರಿ ಸದಸ್ಯರ ವಿಸ್ತರಣೆಗೆ ರೋಟರ‍್ಯಾಕ್ಟ್ ಕ್ಲಬ್‌ಗಳ ವಿಸ್ತರಣೆ ಬಹು ಮುಖ್ಯ. ರೋಟರಿ ವಿಶ್ವ ತಿಳುವಳಿಕೆ ಮತ್ತು ಶಾಂತಿ ದಿನದಂದು ಸಂಸ್ಕೃತಿ, ರಾಷ್ಟ್ರ ಮತ್ತು ನಂಬಿಕೆಗಳಾದ್ಯಂತ ಜನರನ್ನು ಸಂಪರ್ಕಿಸಿವ ಏಕತೆ ಮನೋಭಾವವನ್ನು ನಾವು ಆಚರಿಸುತ್ತೇವೆ ಎಂದು ಹೇಳಿದರು.

ನಿಜವಾದ ಶಾಂತಿ ಇತರರಿಗೆ ತಿಳುವಳಿಕೆ. ಸಹಾನುಭೂತಿ ಮತ್ತು ಸೇವೆಯಿಂದ ಪ್ರಾರಂಭವಾಗುತ್ತದೆ ಎಂದು ರೋಟರಿ ನಮಗೆ ನೆನಪಿಸುತ್ತದೆ. ಒಂದುಗೊಡಿ ಕೆಲಸ ಮಾಡುವ ಮೂಲಕ ಮತ್ತು ಸೇವೆಯನ್ನು ಹೆಚ್ಚಾಗಿ ಮಾಡುವ ಮೂಲಕ ನಾವು ಸ್ನೇಹದ ಸೇತುವೆಗಳನ್ನು ನಿರ್ಮಿಸಿ ಭವಿಷ್ಯದ ಪೀಳಿಗೆಗೆ ಹೆಚ್ಚು ಶಾಂತಿಯುತ ಮತ್ತು ಭರವಸೆಯ ಜಗತ್ತನ್ನು ರಚಿಸಬಹುದು ಎಂದು ತಿಳಿಸಿದರು.

ರೋಟರಿ ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ, ಲಕ್ಷ್ಮಣ್ ಗೌಡ, ತರಬೇತುದಾರ ನಾಗರಾಜ್, ಸುರೇಶ, ವಲಯ ಕಾರ್ಯದರ್ಶಿ ಮೋಹನ್, ಜೆ.ರಾಧಾಕೃಷ್ಣ, ಶಂಕರ್, ಜಗದೀಶ ಸರ್ಜಾ, ರಂಗರಾಜನ್, ಕಿರಣಕುಮಾರ್, ಚಂದ್ರಶೇಖರ್, ಪ್ರಕಾಶ್ ಜಿ.ಎನ್., ಕಾರ್ಯದರ್ಶಿ ರಶ್ಮಿ, ಇವೆಂಟ್  ಕಾರ್ಯದರ್ಶಿ ಮಂಜುಳಾ ರಾಜು, ರೋಟರಿ ಸದಸ್ಯರು ಮತ್ತಿತರರು ಪಾಲ್ಗೊಂಡಿದ್ದರು.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ