“ಬ್ರೆಸ್ಟ್ ಫೀಡಿಂಗ್ ಕುರಿತ ವಿಶೇಷ ಜಾಗೃತಿ ಕಾರ್ಯಕ್ರಮ”
ದಿನಾಂಕ : 05/08/2025 ರಂದು ರಾಗಿ ಗುಡ್ಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, FPA ಸಂಸ್ಥೆಯ ಸಹಯೋಗದೊಂದಿಗೆ ಗರ್ಭಿಣಿ ಸ್ತ್ರೀಯರಿಗೆ ಉಪಯುಕ್ತವಾದ ಬ್ರೆಸ್ಟ್ ಫೀಡಿಂಗ್ ಕುರಿತಂತೆ ವಿಶೇಷ ಜಾಗೃತಿ ಕಾರ್ಯಕ್ರಮ*ವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ FPA ಸಂಸ್ಥೆಯ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಪುಷ್ಪ ಶೆಟ್ಟಿಯವರು ಉಪಸ್ಥಿತರಿದ್ದು, ತಾಯಿಯ ಹಾಲು ಹುಟ್ಟಿದ ಮೊದಲ ಆರು ತಿಂಗಳು ಮಗುವಿಗೆ ಸಂಪೂರ್ಣ ಆಹಾರವಾಗಿದ್ದು, ಮಗುವಿನ ಆರೋಗ್ಯದ ಬೆಳೆವಣಿಗೆಗೆ ಹಾಗೂ ರೋಗ ನಿರೋಧಕ ಶಕ್ತಿಗೆ ಎಷ್ಟು ಸಹಾಯಕವಾಗಿರುತ್ತದೆ ಎಂಬುದರ ಬಗ್ಗೆ ಅತ್ಯಂತ ಮಾಹಿತಿ ಪೂರಿತವಾಗಿ ನುಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಶಿವಮೊಗ್ಗ ಹಾಲ್ಕೊಳದ ಸಖಿ ವನ್ ಸ್ಟಾಪ್ ಸೆಂಟರ್‌ನ ಅಡ್ಮಿನಿಸ್ಟ್ರೇಟರ್ ಶ್ರೀಮತಿ ಅಕ್ಷತಾ ರವರು, ಮಹಿಳೆಯರ ಮೇಲಿನ ಹಿಂಸೆ, ಮಾನಸಿಕ, ದೈಹಿಕ ಮತ್ತು ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯರಿಗೆ ವನ್ ಸ್ಟಾಪ್ ಸೆಂಟರ್ ನೀಡುವ ಸೇವೆಗಳಾದ ವೈದ್ಯಕೀಯ ನೆರವು, ನ್ಯಾಯ ಸಹಾಯ, ತಾತ್ಕಾಲಿಕ ಆಶ್ರಯ ಕುರಿತು ಸಮಗ್ರ ಮಾಹಿತಿ ನೀಡಿದರು.
ಹಾಗೆಯೇ, *ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ರಮ್ಯಾ ರವರು* ಮಕ್ಕಳಿಗೆ ಅತ್ಯಂತ ಸೂಕ್ತವಾದ ಗುಡ್ಮ ಟಚ್ ಮತ್ತು ಬ್ಯಾಡ್ಕು ಟಚ್ ಕುರಿತು ಮಾಹಿತಿ ನೀಡುವ ಮೂಲಕ, ಮಕ್ಕಳ ಭದ್ರತೆ ಕುರಿತು ಮಹತ್ವದ ಅರಿವು ಮೂಡಿಸಿದರು.
ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಚಾಲನೆ ಮಾಡಿರುವ ನಮ್ಮ ಘಟಕದ ಲೇಡಿ ಜೆಸಿ ಗಿರಿಮಲ್ಲಿಕಾ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ತಾಳ್ಮೆ, ನಡವಳಿಕೆ ಹಾಗೂ ಸಮರ್ಪಿತ ಮನೋಭಾವ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಬಹುಮುಖ್ಯ ಪಾತ್ರ ವಹಿಸಿತು.
ಈ ಸಂವೇದನಾಶೀಲ ಹಾಗೂ ಜಾಗೃತಿಮೂಲಕ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ನಮ್ಮ ಜೆಸಿಐ ಶಿವಮೊಗ್ಗ ರಾಯಲ್ಸ್ ಘಟಕ ಮತ್ತೊಮ್ಮೆ ತನ್ನ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ