X&Y ಚಲನಚಿತ್ರ ಜೂ.26 ಕ್ಕೆ ಬಿಡುಗಡೆ - ಸೂತ್ರಧಾರ ಡಿ ಸತ್ಯ
ಜಯನಗರ 4ತ್ ಬ್ಲಾಕ್ (ಕಿರುಚಿತ್ರ), ರಾಮ ರಾಮ ರೇ, ಒಂದಲ್ಲ ಎರಡಲ್ಲ (ರಾಷ್ಟ್ರೀಯ ಪ್ರಶಸ್ತಿ), ಮ್ಯಾನ್ ಆಫ್ ದಿ ಮ್ಯಾಚ್, ಚಿತ್ರದ ನಿರ್ದೇಶಕ ಸೂತ್ರಧಾರ ಡಿ.ಸತ್ಯಪ್ರಕಾಶ್ ನಿರ್ಮಿಸಿ, ನಿರ್ದೇಶಿಸುವುದರ ಜೊತೆಗೆ ಪ್ರಮುಖ ಪಾತ್ರದಲ್ಲೂ ನಟಿಸಿರುವ ಬಹು ನಿರೀಕ್ಷಿತ "X&Y" ಚಿತ್ರ ಜೂ.26 ರಂದು ಬಿಡುಗಡೆಯಾಗಲಿದೆ.
ಚಂದ್ರೋದಯ ಪತ್ರಿಕೆಯೊಂದಿಗೆ ಮಾತನಾಡಿದ ನಿರ್ದೇಶಕ ಡಿ.ಸತ್ಯಪ್ರಕಾಶ್, ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಇತ್ತೀಚೆಗೆ ಟ್ರೇಲರ್ ಬಿಡುಗಡೆಯಾಗಿದ್ದು, ಟ್ರೇಲರ್‌ನಲ್ಲೇ ನಿರ್ದೇಶಕರು ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಚಿತ್ರವನ್ನು ನೋಡುವ ಕಾತುರ ಹೆಚ್ಚಿಸಿದೆ. ವಿಭಿನ್ನ ಕಂಟೆಂಟ್ ಹೊಂದಿರುವ ಈ ಚಿತ್ರದ ಟ್ರೇಲರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರ ಇದೇ ಜೂನ್ 26 ಗುರುವಾರ ರಾಜ್ಯಾದ್ಯಂತ ಎಲ್ಲಾ ಚಲನಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದರು.
ಐದು ಹಾಡು ಬಿಟ್ ಸಾಂಗ್ಸ್ ಇದೆ. ಸೈನ್ಸ್ ಗೊತ್ತಿರುವವರಿಗೆ ಕ್ರೋಮೋಸೋಮ್ಸ್ ಪೋಸ್ಟರ್ ಇದೆ. ಕೆಲವರು ಗಣಿತದ ಫ್ಯಾಂಟಸಿ ಹೂಮರ್, ಹುಟ್ಟುವ ಮಗುವಿನ ಚಿತ್ರವೇ X&Y ಆಗಿದೆ. ಕೌಟುಂಬಿಕ ಸಿನಿಮಾವಾಗಿದೆ. ಮನೆಗೆ ಗೆಸ್ಟ ಬಂದರೆ ಅವರು ಬಂದು ಹೋಗುವ ವರೆಗೆ ಕಂಫರ್ಟಬಲ್ ಆಗಿರಲಿ ಎಂದು ನೋಡಿಕೊಳ್ಳುತ್ತೇವೆ ಹಾಗೆ ಮಗು ಭೂಮಿಗೆ ಬಂದರೆ ಕಂಫರ್ಟಬಲ್ ಆಗಿರಲಿ ಎಂದು ನೋಡಿಕೊಂಡಿದ್ದೇವಾ ಎಂಬ ಪ್ರಶ್ನೆಯೇ ಸಿನಿಮಾದ ಒನ್ ಲೈನ್ ಸ್ಟೋರಿ.
ಮಗು ಭೂಮಿ ಮತ್ತು ಜನರ ಪಾತ್ರದ ಬಗ್ಗೆ ಸಿನಿಮಾ ಹೇಳುತ್ತದೆ ಎಂದು ತಿಳಿಸಿದರೆ.
ನಿರ್ದೇಶಕ ಡಿ ಸತ್ಯಪ್ರಕಾಶ್ ಅವರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ "X&Y" ಚಿತ್ರಕ್ಕೆ ಲವಿತ್ ಛಾಯಾಗ್ರಹಣ, ಬಿ.ಎಸ್.ಕೆಂಪರಾಜು ಸಂಕಲನ, ಕೌಶಿಕ್ ಹರ್ಷ ಸಂಗೀತ ನಿರ್ದೇಶನ ಹಾಗೂ ವರದರಾಜ್ ಕಾಮತ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರವನ್ನು ಸತ್ಯ ಪಿಕ್ಚರ್ಸ್ ನಿರ್ಮಿಸಿದೆ. ಬೃಂದಾ ಆಚಾರ್ಯ, ಡಿ.ಸತ್ಯಪ್ರಕಾಶ್, ಅಯಾನ, ಅಥರ್ವ ಪ್ರಕಾಶ್, ದೊಡ್ಡಣ್ಣ, ವೀಣಾ ಸುಂದರ್, ಸುಂದರ್ ವೀಣಾ, ಹರಿಣಿ, ಧರ್ಮಣ್ಣ ಕಡೂರ್, ತೇನಪ್ಪನ್ ಮುಂತಾದವರು "X&Y" ಚಿತ್ರದ ತಾರಾಬಳಗದಲ್ಲಿದ್ದಾರೆ.
- ನವೀನ್ ತಲಾರಿ, ವ್ಯವಸ್ಥಾಪಕ ಸಂಪಾದಕ


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ