ರಾಜ್ಯಮಟ್ಟದ ಫಿಡೆ ಕ್ಲಾಸಿಕಲ್ ರೇಟಿಂಗ್ ಚೆಸ್ ಪಂದ್ಯಾವಳಿ ಜೆಸಿಐ ಶಿವಮೊಗ್ಗ ಚಿರಂತನ ಸಹಯೋಗದೊಂದಿಗೆ

 

  ಜೂನ್ 27 ,28 ಹಾಗೂ 29 ಶಿವಮೊಗ್ಗ ನಗರದಲ್ಲಿ ಚಾಣಕ್ಯ ಚೆಸ್ ಸ್ಕೂಲ್ ಮತ್ತು ಜೆಸಿಐ ಶಿವಮೊಗ್ಗ ಚಿರಂತನ ವತಿಯಿಂದ ಮೊದಲ ಬಾರಿಗೆ  ಮೂರು ದಿನಗಳ 19 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ರಾಜ್ಯಮಟ್ಟದ ಫಿಡೆ ಕ್ಲಾಸಿಕಲ್ ರೇಟಿಂಗ್ ಚೆಸ್ ಪಂದ್ಯಾವಳಿಯನ್ನು ನಗರದ ಶ್ರೀ ವೀರಶೈವ ಕಲ್ಯಾಣ ಮಂದಿರದಲ್ಲಿ ಆಯೋಜಿಸಲಾಗಿದೆ. 27 ಶುಕ್ರವಾರ ಬೆಳಗ್ಗೆ 9.30ಕ್ಕೆ ಉದ್ಗಾಟನಾ ಕಾರ್ಯಕ್ರಮ ಇರುತ್ತದೆ, ಮುಖ್ಯ ಅತಿಥಿಗಳಾಗಿ ಜೆಸಿಐ ವಲಯ 24 ರ ಅಧ್ಯಕ್ಷರಾದ ಜೆಸಿಐ ಸೆನೆಟರ್ ಸಿಎ ಗೌರೀಶ್ ಭಾರ್ಗವ್ ಮತ್ತು ವಿನೋಬಾ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್ ಡಿ ಕೆ ರವರು ಆಗಮಿಸಲಿದ್ದಾರೆ.

ಈ ಪಂದ್ಯಾವಳಿಯೂ ಬಾಲಕ  ಮತ್ತು ಬಾಲಕಿಯ ಪ್ರತ್ಯಕ ವಿಭಾಗಗಳಲ್ಲಿ ನಡೆಯಲಿದೆ, ಒಟ್ಟು ನಗದು ಬಹುಮಾನ 72000 ಸಾವಿರ ರೂ ಹಾಗೂ 120 ಟ್ರೋಫಿಗಳು ನೀಡಲಾಗುವುದು. ಈ ಪಂದ್ಯವಳಿಗೆ ಹೆಸರು ನೋಂದಾಯಿಸುವವರು  ಎ.ಐ.ಸಿ.ಎಫ್ ಹಾಗೂ ಕೆ.ಎಸ್.ಸಿ.ಎ  ಯ ನೊಂದಣಿಯೂ ಮಾಡಿಸಿರಬೇಕು, ಈ ಪಂದ್ಯಾವಳಿಯಲ್ಲಿ ವಿಜೇತರಾದ ಮೊದಲ ನಾಲ್ಕು ಬಾಲಕಿ ಮತ್ತು ಬಾಲಕ ಸ್ಪರ್ಧಿಗಳನ್ನು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಮಾಡಿ ಕಳುಹಿಸಲಾಗುವುದು. ಹೆಸರು ನೋಂದಾಯಿಸಲು ಕಡೆಯ ದಿನಾಂಕ 26 ಜೂನ್ 2025 ಸಂಜೆ 4.00 ಗಂಟೆವರೆಗೆ ಸಮಯವಿರುತ್ತದೆ. ಹೆಸರು ನೋಂದಾಯಿಸಲು ಸಂಪರ್ಕಿಸಿ 9845830133, 9741591672

ಚಾಣಕ್ಯ ಚೆಸ್ ಸ್ಕೂಲ್  ಸಂಸ್ಥಾಪಕರಾದ ವಿಲ್ಸನ್ ಅಂದ್ರಾದೆ ಹಾಗೂ ಆಶಾ , ಜೆಸಿಐ ವಲಯ 24 ರ ಉಪಾಧ್ಯಕ್ಷರಾದ ಜೆಸಿ ಪ್ರಮೋದ್ ಶಾಸ್ತ್ರೀ, ಜೆಸಿಐ ಶಿವಮೊಗ್ಗ ಚಿರಂತನದ ಅಧ್ಯಕ್ಷರಾದ ಜೆಸಿ ರುದ್ರೇಶ್ ಕೋರಿ, ಕಾರ್ಯದರ್ಶಿ ಜೆಸಿ ವೈಷ್ಣವಿ ಚಂದನ್, ಶಿವಮೊಗ್ಗ ಚೆಸ್ ಅಸೋಸಿಯೇಷನ್ ಕಾರ್ಯದರ್ಶಿ  ಸಚಿನ್ ಪಿ ಎಸ್, ಹಾಗೂ ಈ ಪಂದ್ಯಾವಳಿಯ ಮುಖ್ಯ ತೀರ್ಪುಗಾರರು ಪ್ರಾಣೇಶ್ ಯಾದವ್   ರವರ ವಿಶೇಷ ಉಪಸ್ಥಿತಿ ಇರುತ್ತದೆ.

ಧನ್ಯವಾದಗಳೊಂದಿಗೆ ಚಾಣಕ್ಯ ಚೆಸ್ ಸ್ಕೂಲ್ ಶಿವಮೊಗ್ಗ. ಜೆಸಿಐ ಶಿವಮೊಗ್ಗ ಚಿರಂತನ.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ