ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದ ಚಿತ್ರ

 


ಸಮರ್ಥ್ ಕಡಕೋಳ್ ನಿರ್ದೇಶನದ "ಎಡಗೈಯೇ ಅಪಘಾತಕ್ಕೆ ಕಾರಣ" ಸಿನಿಮಾವು ರಾಜದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರು ಕನ್ನಡ ಸಿನಿಮಾಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್ಗಳಲ್ಲಿ ನೋಡಿ ಬೆಂಬಲಿಸ ಬೇಕು ಎಂದು ನಿರ್ಮಾಪಕ ರಾಜೇಶ್ ಕೀಳಂಬಿ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ‘ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾವು ಕಳೆದ ಜೂನ್ 13ರಂದು ರಾಜದ್ಯಂತ ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಶೈಲಿಯ ನಿರೂಪಣೆ ಮತ್ತು ತಾಂತ್ರಿಕತೆಯ ವಿಭಿನ್ನತೆ ಇಲ್ಲಿ ಕಂಡು ಬರುತ್ತದೆ. ಎಡಗೈ ಬಳಸುವವರ ಸಂಕಷ್ಟಗಳ ಸುತ್ತ ಚಿತ್ರ ಹೆಣೆದುಕೊಂಡಿದ್ದು, ಲಘು ಹಾಸ್ಯದ ಮೂಲಕ ಮತ್ತು ಕೌತುಕದ ಮೂಲಕ ಚಿತ್ರ ಸಾಗಿದ್ದು, ಪ್ರೇಕ್ಷಕರು ಈ ಚಿತ್ರವನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ ಇದು ನಮಗೆ ಸಂತೋಷ ತಂದಿದೆ ಎಂದರು.

ಈ ಚಿತ್ರದ ನಾಯಕ ದಿಗಂತ್ ಆಗಿದ್ದು, ಇವರು ಶಿವಮೊಗ್ಗ ಜಿಲ್ಲೆಯವರೇ ಆಗಿದ್ದಾರೆ. ಶಿವಮೊಗ್ಗದ ನಂಟು ಚಿತ್ರದ ಜೊತೆಗೆ ಬೆಸೆದುಕೊಂಡಿದೆ. ಶಿವಮೊಗ್ಗದಲ್ಲಿ ಮಲ್ಲಿಕಾರ್ಜುನ ಟಾಕೀಸ್ ಮತ್ತು ಭಾರತ ಸಿನಿಮಾದಲ್ಲಿ ಪ್ರದರ್ಶನ ಕಾಣುತ್ತಿದೆ. ದಿನಕ್ಕೆ ಒಟ್ಟು 10 ಶೋಗಳ ಪ್ರದರ್ಶನ ಕಾಣುತ್ತಿದೆ. ಈ ದಿನದ ಎಲ್ಲಾ ಶೋಗಳು ಕೂಡ ಭರ್ತಿಯಾಗಿವೆ ಎಂದು ತಿಳಿದು ಬಂದಿದೆ. ಇದು ನಮಗೆ ಯಶಸ್ಸು ತಂದಿದೆ ಎಂದರು.

ನಿರ್ಮಾಪಕ ಸಮರ್ಥ್ ಕಡಕೋಳ್ ಮಾತನಾಡಿ, ಇದು ನನ್ನ ಮೊದಲನೇ ನಿರ್ದೇಶನದ ಸಿನಿಮಾವಾಗಿದೆ. ನಿರ್ಮಾಪಕ ರಾಜೇಶ್ ಕೀಳಂಬಿಯವರು ಈ ಚಿತ್ರದ ಯಶಸ್ಸಿಗೆ ಮತ್ತು ಪ್ರಚಾರಕ್ಕೆ ಕಾರಣರಾಗಿದ್ದಾರೆ. ಈ ಚಿತ್ರದಲ್ಲಿ ನಾಯಕ ನಟಿಯಾಗಿ ಈಗಾಗಲೇ ಸಿನಿಮಾದಲ್ಲಿ ಒಳ್ಳೆಯ ಹೆಸರು ಗಳಿಸಿರುವ ನಿಧಿಸುಬ್ಬಯ್ಯ ಕಾಣಿಸಿಕೊಂಡಿದ್ದಾರೆ. ಮತ್ತೊಬ್ಬ ಭರವಸೆಯ ನಟಿ ಧನುಹರ್ಷ, ರಾಧಿಕಾ ನಾರಾಯಣ್ ಸೇರಿದಂತೆ ಹಲವರಿದ್ದಾರೆ. ಛಾಯಾಗ್ರಹಣದ ಹೊಣೆಯನ್ನು ಅಭಿಮನ್ಯು ಸದಾನಂದ ನಿರ್ವಹಿಸಿದ್ದಾರೆ. ಸಂಗೀತವನ್ನು ಪ್ರದ್ಯೋತ್ತನ್ ನೀಡಿದ್ದಾರೆ. ಇಡೀ ಸಿನಿಮಾವು ಡಾರ್ಕ್ ಹ್ಯೂಮರ್ ಕ್ರೈಮ್ ಥ್ರಿಲ್ಲರ್ ಆಗಿದೆ ಎಂದರು.

ಎಡಗೈ ಬಳಸುವ ಸಂಕಷ್ಟಗಳನ್ನು ಕುರಿತು ಮಾತನಾಡಿದ ನಟ ದಿಗಂತ್ ಈ ಸಿನಿಮಾ ನನಗೆ ಒಂದು ವಿಶಿಷ್ಟವಾದ ಅನುಭವ ತಂದಿದೆ. ನಾನು ಬಳಗೈ ಬಳಸುತ್ತಿದ್ದರೂ ಕೂಡ ಎಡಗೈ ಬಳಸಬೇಕಾದ ಅನಿವಾರ್‍ಯತೆ ಇದ್ದಿದ್ದರಿಂದ ಎಡಗೈ ಬಳಸುವುದನ್ನೇ ಅಭ್ಯಾಸ ಮಾಡಿಕೊಳ್ಳಬೇಕಾಯಿತು. ಒಟ್ಟಾರೆ ಈ ಚಿತ್ರ ಯಶಸ್ವಿಯಾಗಿ ಸಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಟ ದಿಗಂತ್, ನಟಿಯರಾದ ನಿಧಿ ಸುಬ್ಬಯ್ಯ, ಧನುಹರ್ಷಾ, ನಿರ್ದೇಶಕರಾದ ಸುಮುಖ್ ಕಡುಕೋಳ , ಉದಯ್ ಕದಂಬ, ಶ್ರೀನಾಗ್, ಮುಂತಾದವರಿದ್ದರು.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ