ಏರ್‌ಟೆಲ್ ಬಳಕೆದಾರರಿಗೆ ಮಾತ್ರ ಈ ಸಮಸ್ಯೆ
ಈ ಎಲ್ಲ ಸಮಸ್ಯೆಗಳು ಜಿಯೋ, ವಡಾಫೋನ್, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‌ನಲ್ಲಿ ಆಗಿಲ್ಲ. ಬದಲಾಗಿ ಏರ್‌ಟೆಲ್ ಬಳಕೆದಾರರಿಗೆ ಮಾತ್ರ ಈ ಸಮಸ್ಯೆ ಕಾಣಿಸಿಕೊಂಡಿದೆ. ಸದ್ಯ ಇದರಿಂದ ಏರ್‌ಟೆಲ್ ಸಿಮ್ ಬಳಕೆದಾದರು ಪರದಾಡುವಂತಾಗಿದೆ.
ಅಸಲಿಗೆ ಆಗಿದ್ದೇನು? ತಾಂತ್ರಿಕ ಸಮಸ್ಯೆಯೇ ಇದಕ್ಕೆ ಕಾರಣ ಎಂದು ಏರ್‌ಟೆಲ್ ಆಪರೇಟರ್ಸ್‌ಗಳು ಮಾಹಿತಿ ನೀಡಿದ್ದು, ಕರೆ ಮಾಡಲು, ಸಂದೇಶ ಕಳುಹಿಸಿ ರಾತ್ರಿ ಹೆಚ್ಚಿನ ಸಮಸ್ಯೆಯಾಗಿತ್ತು. ಏರ್‌ಟೆಲ್ ಸೈಟ್‌ಗಳ ಪೈಕಿ ಒಂದರಲ್ಲಿ ಮೂಲಸೌಕರ್ಯಕ್ಕೆ ಸಂಬಂಧಿತ ಸಮಸ್ಯೆ ಕಂಡು ಬಂದಿತ್ತು. ಅದನ್ನು ಈಗ ಪರಿಹರಿಸಲಾಗಿದೆ. ವ್ಯವಸ್ಥೆಯನ್ನು ಸಂಪೂರ್ಣ ಮರು ಸ್ಥಾಪನೆ ಮಾಡಿ, ತಾಂತ್ರಿಕ ಸಮಸ್ಯೆ ಸರಿಪಡಿಸಲಾಗಿದೆ. ಇದೀಗ ಕರೆಗಳು, ಎಸ್‌ಎಂಎಸ್, ಇಂಟರ್‌ನೆಟ್‌ಗೆ ಯಾವುದೇ ಸಮಸ್ಯೆ ಆಗುತ್ತಿಲ್ಲ ಎಂದು ಏರ್‌ಟೆಲ್ ಆಪರೇಟರ್ಸ್‌ಗಳು ತಿಳಿಸಿದ್ದಾರೆ.
ಜೋರು ಗಾಳಿ ಬೀಸಿದಾಗ ಸಮಸ್ಯೆ ಸೃಷ್ಟಿ : ತಡರಾತ್ರಿ ತಂಪು ವಾತಾವರಣ ಕಂಡು ಬರುತ್ತಿರುವ ಬೆಂಗಳೂರಿನಲ್ಲಿ ಕೆಲವು ಪ್ರದೇಶಗಳಲ್ಲಿ ಜೋರು ಗಾಳಿ ಬೀಸುತ್ತದೆ. ಹೆಚ್ಚು ಗಿಡ ಮರಗಳು ಇರುವ ಪ್ರದೇಶಗಳಲ್ಲಿ ಹೀಗೆ ವ್ಯಾಪಕ ಗಾಳಿ ದಿಢೀರ್ ಬೀಸಿದಾಗ ಇಂತಹ ತಾಂತ್ರಿಕ ಸಮಸ್ಯೆಗಳು ಉದ್ಭವಿಸುವುದು ಸಾಮಾನ್ಯ. ಅದನ್ನು ಕಂಡು ಕೊಂಡು ಕೂಡಲೇ ಸಮಸ್ಯೆ ಸರಿ ಮಾಡಿದ್ದೇವೆ. ಸರಿಪಡುವವರೆಗೆ ಗ್ರಾಹಕರು ತಾತ್ಕಾಲಿಕವಾಗಿ ಧ್ವನಿ ಕರೆ, ಇಂಟರ್‌ನೆಟ್ ಸಮಸ್ಯೆ ಎದುರಿಸಿರುತ್ತಾರೆ. ಬಳಿಕ ಎಲ್ಲವು ಸರಿ ಹೋಗುತ್ತದೆ ಎಂದು ಏರ್‌ಟೆಲ್ ಆಪರೇಟರ್ಸ್‌ಗಳು ತಿಳಿಸಿದ್ದಾರೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ