ನಟಿ ಸೌಂದರ್ಯ ಸಾವು ಅಪಘಾತವಲ್ಲ, ಕೊಲೆ!? ತೆಲುಗು ನಟನ ವಿರುದ್ಧ ದೂರು ದಾಖಲು!!

ದಿವಂಗತ ನಟಿ ಸೌಂದರ್ಯ

 ನಟಿ ಸೌಂದರ್ಯ ಸಾವು ಅಪಘಾತವಲ್ಲ, ಕೊಲೆ!?ತೆಲುಗು ನಟನ ವಿರುದ್ಧ ದೂರು ದಾಖಲು!!

ಬಹುಭಾಷಾ ನಟಿ ಸೌಂದರ್ಯ ಸಾವನ್ನಪ್ಪಿ ದಶಕಗಳೇ ಕಳೆದು ಹೋಗಿದೆ. ಅಭಿಮಾನಿಗಳ ಮನದಲ್ಲಿ ನಟಿ ಸೌಂದರ್ಯ ಸುಮಧುರ ನೆನಪಾಗಿ ಅಚ್ಚಳಿಯದೇ ಉಳಿದಿದ್ದಾರೆ. ಆದ್ರೆ ಇದೀಗ ಸೌಂದರ್ಯ ಸಾವಿನ ಕುರಿತು ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. 2004 ಜುಲೈ 7ರಂದು ಬೆಂಗಳೂರಿನಿಂದ ಲಘು ವಿಮಾನದಲ್ಲಿ ಹೊರಟಿದ್ದ ಸೌಂದರ್ಯ ಅವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ರು ಎನ್ನುವುದು ಎಲ್ಲರಿಗೂ ತಿಳಿದಿದೆ. ಆದ್ರೆ ನಟಿ ಸತ್ತ 25 ವರ್ಷದ ಬಳಿಕ ಸೌಂದರ್ಯ ಸಾವು ಅಪಘಾತವಲ್ಲ, ಕೊಲೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಟಾರ್ ನಟನ ವಿರುದ್ಧ ದೂರು ಕೊಟ್ಟಿದ್ಯಾರು? ಅಸಲಿ ಕಥೆ ಏನು ಗೊತ್ತಾ?

ಟಾಲಿವುಡ್ ಸ್ಟಾರ್ ನಟನ ವಿರುದ್ಧ ದೂರು! 

ಕೆಲ ತಿಂಗಳಿಂದ ಟಾಲಿವುಡ್ ಹಿರಿಯ ನಟ ಮೋಹನ್ ಬಾಬು ಹಲವು ಕೌಟುಂಬಿಕ ಕಲಹಗಳ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಕಿರಿಯ ಮಗ ಮಂಚು ಮನೋಜ್ ವಿಚಾರಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ರು. ಇದೀಗ ಆಂಧ್ರಪ್ರದೇಶದ ಖಮ್ಮಂ ಜಿಲ್ಲೆಯಲ್ಲಿ ಮೋಹನ್ ಬಾಬು ವಿರುದ್ಧ ಅಚ್ಚರಿಯ ಪ್ರಕರಣವೊಂದು ದಾಖಲಾಗಿದೆ. ಸೌಂದರ್ಯ ಸಾವಿನ ಹಿಂದೆ ನಟ ಮೋಹನ್ ಬಾಬು ಕೈವಾಡವಿದೆ ಎಂದು ವ್ಯಕ್ತಿಯೊಬ್ಬ ಆರೋಪ ಮಾಡ್ತಿದ್ದಾರೆ ಎಂದು ವರದಿ ಆಗಿದೆ.

ಸೌಂದರ್ಯ, ಮೋಹನ್ ಬಾಬು ನಡುವೆ ಆಸ್ತಿ ಸಮರ!

ಕನ್ನಡ ನಟಿ ಸೌಂದರ್ಯ ಅವರು ಶಂಷಾಬಾದ್ ವ್ಯಾಪ್ತಿಯ ಜಲ್ಪಲ್ಲಿ ಗ್ರಾಮದಲ್ಲಿ 6 ಎಕರೆ ಭೂಮಿಯನ್ನು ಖರೀದಿಸಿದ್ರು. ಮೋಹನ್ ಬಾಬು ಆಕೆಗೆ ಭೂಮಿಯನ್ನು ನನಗೆ ಮಾರಾಟ ಮಾಡುವಂತೆ ಹೇಳಿದ್ರಂತೆ. ಆದ್ರೆ ನಟಿ ಸೌಂದರ್ಯ ಮತ್ತು ಅವರ ಸಹೋದರ ಅಮರನಾಥ್ ಇದಕ್ಕೆ ಒಪ್ಪಲಿಲ್ಲ. ಈ ವಿಚಾರ ಇಬ್ಬರ ನಡುವಿನ ಮುನಿಸಿಗೂ ಕಾರಣವಾಗಿತ್ತು ಎಂದು ಸ್ಥಳೀಯ ವ್ಯಕ್ತಿ ದೂರಿನಲ್ಲಿ ಆರೋಪಿಸಿದ್ದಾರೆ.

ಸೌಂದರ್ಯ ಕುಟುಂಬದ ಮೇಲಿತ್ತಾ ಒತ್ತಡ!?

ಸೌಂದರ್ಯ ಅವರ ಕುಟುಂಬ ಸದಸ್ಯರು 6 ಎಕರೆ ಭೂಮಿಯನ್ನು ಮಾರಾಟ ಮಾಡಲು ನಿರಾಕರಿಸಿದ ನಂತರ ನಟ ಮೋಹನ್ ಬಾಬು ಅವರ ಮೇಲೆ ಒತ್ತಡ ಹೇರಿದ್ರಂತೆ. ಏಪ್ರಿಲ್ 17, 2004 ರಂದು, ತೆಲಂಗಾಣದಲ್ಲಿ ಪಕ್ಷದ ಪ್ರಚಾರಕ್ಕಾಗಿ ಬೆಂಗಳೂರಿನಿಂದ ಬರ್ತಿದ್ದ ಸೌಂದರ್ಯ ಹಾಗೂ ಸಹೋದರ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತವಾಯ್ತು. ಅಪಘಾತಕ್ಕೆ ಕಾರಣ, ಪುರಾವೆಗಳು ಸಿಗಲಿಲ್ಲ, ಅದಾದ ನಂತರ, ನಟ ಮೋಹನ್ ಬಾಬು ಜಲಪಲ್ಲಿಯಲ್ಲಿ 6 ಎಕರೆ ಭೂಮಿಯನ್ನು ಅಕ್ರಮವಾಗಿ ಬಳಸುತ್ತಿದ್ದಾರೆ ಎಂದು ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.

ಮಂಚು ಮೋಹನ್ ಬಾಬು ಆಕ್ರಮಿಸಿಕೊಂಡಿರುವ ಭೂಮಿಯನ್ನು ಸರ್ಕಾರ ವಶಪಡಿಸಿಕೊಳ್ಳಬೇಕು. ಚಿಟ್ಟಿಮಲ್ಲು ಎಂಬಾತ ಖಮ್ಮಂ ಎಸಿಪಿ ಮತ್ತು ಖಮ್ಮಂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಆ ಭೂಮಿಯನ್ನು ಅನಾಥಾಶ್ರಮ, ಮಿಲಿಟರಿ ಸಹೋದರರು, ಪೊಲೀಸರು ಅಥವಾ ಮಾಧ್ಯಮ ಸ್ನೇಹಿತರಿಗೆ ನೀಡಬೇಕೆಂದು ವಿನಂತಿಸಿದ್ರು.

ನನಗೆ ಜೀವ ಬೆದರಿಕೆ ಇದೆ

ಈತ ತಮ್ಮ ದೂರಿನಲ್ಲಿ ಮಂಚು ಕುಟುಂಬದಲ್ಲಿ ನಡೆಯುತ್ತಿರುವ ವಿವಾದದ ಬಗ್ಗೆ ಕೂಡ ಉಲ್ಲೇಖಿಸಿದ್ದಾರೆ. ಮಂಚು ಮನೋಜ್‌ಗೆ ನ್ಯಾಯ ಸಿಗಬೇಕೆಂದು ನಾನು ಒತ್ತಾಯಿಸುತ್ತೇನೆ. ಜಲಪಲ್ಲಿಯಲ್ಲಿ 6 ಎಕರೆ ವಿಸ್ತೀರ್ಣದಲ್ಲಿರುವ ಅತಿಥಿ ಗೃಹವನ್ನು ಸಹ ಸ್ವಾಧೀನಪಡಿಸಿಕೊಳ್ಳಬೇಕು. ಅಲ್ಲದೆ, ಮಂಚು ಮೋಹನ್ ಬಾಬು ಅವರಿಂದ ನನಗೆ ಜೀವ ಬೆದರಿಕೆ ಇದೆ. ಆದ್ದರಿಂದ, ದೂರುದಾರರು ಪೊಲೀಸರಿಗೆ ದೂರು ನೀಡಿ, ತಮಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಕೋರಿದ್ದಾರೆ.


- ವರದಿಗಾರ

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ