ಸ್ವೀಪ್ ನಿಂದ "ಬನ್ನಿ ಮತಕಟ್ಟೆಗೆ" ಪುಸ್ತಕ ನಿರ್ಲಕ್ಷ





 ಶಿವಮೊಗ್ಗ ಜಿಲ್ಲಾ ಸ್ವಿಪ್ ಗೆ ಬೆಂಬಲಿಸಿ ಸೂರ್ಯಗಗನ ಕನ್ನಡ ದಿನಪತ್ರಿಕೆಯ ಮತದಾನ ನಮ್ಮ ಹಕ್ಕು ಕುರಿತಾದ ಜಾಗೃತ ಅಕ್ಷರ ಅಭಿಯಾನದ ಕವನಗಳ ಪುಸ್ತಕವನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಗಾರಾ ಪ್ರಕಾಶನದಿಂದ ಬಿಡುಗಡೆ ಮಾಡಲಾಗಿತ್ತು. 'ಬನ್ನಿ ಮತಕಟ್ಟೆಗೆ'  ಗಾರ ಶ್ರೀನಿವಾಸ್ ಅವರ ಪದ್ಯಗಳು ಚುನಾವಣೆ ಸಮಯದಲ್ಲಿ ಸಾರ್ವಜನಿಕರನ್ನು ತಲುಪಿ ಜಾಗೃತಿ ಮೂಡಿಸಿದವು. 

  ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾಡಳಿತದ ಸಂಯೋಗದೊಂದಿಗೆ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಜಾಗೃತಿ ಕಾರ್ಯಕ್ರಮ ನಡೆಯುತ್ತಿದ್ದವು. 

  ಸ್ವೀಪ್ ಪುಸ್ತಕವನ್ನು ಪಡೆದಿದ್ದು ಬಿಟ್ಟರೆ. ಪುಸ್ತಕದ ಗೌರವ ಧನದ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತೋರಿದೆ. ಜಾಗೃತಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡುವ ಸ್ವೀಪ್. ಸಾಹಿತಿಗಳು ಪತ್ರಕರ್ತರು ಸಮಾಜ ಸೇವಕರು ಆದ ಗಾರ ಶ್ರೀನಿವಾಸ್ ಅವರ ಕವನ ಸಂಕಲವನ್ನು ನಿರ್ಲಕ್ಷಿಸಿರುವುದು ಸಾಹಿತಿಗಳಿಗೆ ಮಾಡಿರುವ ಅವಮಾನವಾಗಿದೆ. 

ಮಹಾನಗರ ಪಾಲಿಕೆಯ ಆಯುಕ್ತರು, ಜಿಲ್ಲಾ ಪಂಚಾಯತ್ ಸಿಇಒ ಈ ಪುಸ್ತಕದ ಬಗ್ಗೆ,  ತಮ್ಮ ನಿಲುವನ್ನು ಮಾಧ್ಯಮಗಳಿಗೆ ಉತ್ತರಿಸಬೇಕಾಗಿದೆ.

ಕಾಮೆಂಟ್‌ಗಳು

Most recent news

ಅಜ್ಜಿ ಕೊಲೆ ಪ್ರಕರಣದ ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್; ಕಾಲಿಗೆ ಗುಂಡೇಟು

ಗಾಂಜಾ ಚಾಳಿಗೆ ವಿರೋಧಿಸಿದ್ದ ಅಜ್ಜಿ ಹತ್ಯೆ; ಮೊಮ್ಮಗನಿಂದಲೇ ಸೈಜುಕಲ್ಲು ಎತ್ತಿಹಾಕಿ ಕೊಲೆ!

ಭಾವಪೂರ್ಣ ಶ್ರದ್ಧಾಂಜಲಿ